ಕಾಯಿ ಸುಲಿಯುತ್ತಿದ್ದ ಯುವಕನತ್ತ ಫೈರಿಂಗ್, ಕಾಲ ಬಳಿ ಬಂದು ಬಿದ್ದವು ಎರಡು ಬುಲೆಟ್, ಹತ್ಯೆಗೆ ನಡೆದಿತ್ತಾ ಸಂಚು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SAGARA NEWS | 21 ಸೆಪ್ಟೆಂಬರ್ 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಮನೆ ಆವರಣದಲ್ಲಿ ತೆಂಗಿನ ಕಾಯಿ ಸುಲಿಯುತ್ತಿದ್ದ ಯುವಕನನ್ನು ಗುರಿಯಾಗಿಸಿಕೊಂಡು ಏರ್ ಗನ್’ನೊಂದ ಶೂಟ್ ಮಾಡಲಾಗಿದೆ. ಎರಡು ಭಾರಿ ಫೈರಿಂಗ್ ಮಾಡಲಾಗಿದೆ.

ಗಣೇಶ ಚತುರ್ಥಿಯ ಹಿಂದಿನ ದಿನ ಘಟನೆ ಸಂಭವಿಸಿದೆ. ಸಾಗರ ತಾಲೂಕು ಸುಳಗೋಡಿನ ಮುಂಬಾಳು ಗ್ರಾಮದ ಗಿರೀಶ್ ಅವರ ಪುತ್ರ ದೀಪಕ್ ಮೇಲೆ ಗುಂಡು ಹಾರಿಸಲಾಗಿದೆ.

ಹೇಗಾಯ್ತು ಘಟನೆ?

ಗಣೇಶ ಹಬ್ಬದ ಹಿಂದಿನ ದಿನ ಸಂಜೆ ಗಿರೀಶ್ ಅವರು ಗಣೇಶ ಮೂರ್ತಿ ತರಲು ತೆರಳಿದ್ದರು. ರಾತ್ರಿ 7.30ರ ಹೊತ್ತಿಗೆ ದೀಪಕ್, ತಮ್ಮ ಮನೆಯ ಆವರಣದಲ್ಲಿ ತೆಂಗಿನಕಾಯಿ ಸುಲಿಯುತ್ತಿದ್ದರು. ಈ ವೇಳೆ ಪಕ್ಕದ ಫ್ಲಾಟ್’ನಿಂದ ದೀಪಕ್’ನನ್ನು ಗುರಿಯಾಗಿಸಿಕೊಂಡು ಏರ್ ಗನ್’ನಿಂದ ಎರಡು ಭಾರಿ ಶೂಟ್ ಮಾಡಲಾಗಿದೆ.

ಬುಲೆಟ್’ಗಳು ದೀಪಕ್’ನ ಕಾಲಿನ ಬಳಿಗೆ ಬಂದು ಬಿದ್ದಿವೆ. ಇದರಿಂದ ಆತಂಕಕ್ಕೀಡಾದ ದೀಪಕ್ ಮನೆಯೊಳಗೆ ಓಡಿದ್ದಾನೆ. ತಂದೆ ಗಿರೀಶ್ ಅವರು ಮನೆಗೆ ಮರಳಿದಾಗ ವಿಚಾರ ತಿಳಿಸಿದ್ದಾರೆ.

ಕಾಡಿನಲ್ಲಿ ತಲೆಗೆ ಹೊಡೆದಿದ್ದರು

ಆಗಸ್ಟ್ 2ರಂದು ತಮ್ಮದೇ ತೋಟದಲ್ಲಿ ದೀಪಕ್ ಮೇಲೆ ಹಲ್ಲೆಯಾಗಿತ್ತು. ಅಡಕೆ, ತೆಂಗಿನ ತೋಟಕ್ಕೆ ಬಂದ ಮಂಗಗಳನ್ನು ಓಡಿಸಲು ದೀಪಕ್ ತನ್ನ ತಂದೆ ಗಿರೀಶ್ ಜೊತೆಗೆ ತೆರಳಿದ್ದರು. ಮಂಗಗಳನ್ನು ಓಡಿಸುತ್ತ ಗಿರೀಶ್ ಅವರು ಕಾಡಿನೊಳಗೆ ಹೋಗಿದ್ದಾರೆ.

LifeSpring%2BKan%2B02

ದೀಪಕ್’ಗೆ ತೋಟದಲ್ಲೆ ಇರುವಂತೆ ಗಿರೀಶ್ ಅವರು ಹೇಳಿದ್ದರು. ತಂದೆ ಬರುವುದು ತಡವಾದ್ದರಿಂದ ದೀಪಕ್ ತೋಟದಲ್ಲಿ ಮಲಗಿದ್ದ. ಆಗ ಯಾರೋ ಅತನ ಹಿಂದಿನಿಂದ ಬಂದು ತಲೆಗೆ ಹೊಡೆದಿದ್ದಾರೆ. ಬಡಿಗೆ ಅಥವಾ ಬಂದೂಕಿನ ಹಿಂಭಾಗದಿಂದ ಹೊಡೆದಿರುವ ಶಂಕೆ ಇದೆ.

ಜೋರಾಗಿ ಕೂಗಿಕೊಂಡ ದೀಪಕ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ಕೂಗು ಕೇಳುತ್ತಿದ್ದಂತೆ ಓಡಿ ಬಂದ ಗಿರೀಶ್ ಅವರು ದೀಪಕ್’ನನ್ನು ಸಾಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

ದೀಪಕ್’ನ ಕೊಲೆಗೆ ಪ್ರಯತ್ನಿಸಲಾಗುತ್ತಿದೆ ಎಂಬ ಅನುಮಾನದ ಮೇಲೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ ಮೂಲಕ ಸುದ್ದಿಗಾಗಿ 7411700200

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment