ಶಿವಮೊಗ್ಗ: ನಗರದ ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗದಿಂದ ಫೆಬ್ರವರಿ 7, 8ರಂದು ಬಾಪೂಜಿ ನಗರ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ (Cricket) ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಅಧ್ಯಕ್ಷ ಕಿರಣ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಅಂಗವಾಗಿ ಮೊದಲ ಬಾರಿ ಬಳಗದಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಗೆ ನೋಂದಣಿ ಮಾಡಿಕೊಂಡ 40 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ಪಂದ್ಯಗಳು ನಡೆಯಲಿವೆ. ₹2,000 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದರು.
ಹೇಗಿರಲಿದೆ ಪಂದ್ಯ? ಏನೆಲ್ಲ ಬಹುಮಾನ?
ಪ್ರತಿ ಪಂದ್ಯ ಐದು ಓವರ್ಗಳಿಗೆ ಸೀಮಿತವಾಗಿರುತ್ತದೆ.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ಬಹುಮಾನವಾಗಿ 30 ಕೆಜಿ ತೂಕದ ಎರಡು ಟಗರು
ದ್ವಿತೀಯ ಬಹುಮಾನವಾಗಿ 30 ಕೆಜಿಯ ಒಂದು ಟಗರು, ತೃತೀಯ ಬಹುಮಾನವಾಗಿ ₹10,001 ನಗದು ಹಾಗೂ ಟ್ರೋಫಿ ನೀಡಲಾಗುವುದು
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ.
ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ