ಶಿವಮೊಗ್ಗ ಲೈವ್.ಕಾಂ | SHIKARIPURA NEWS | 5 NOVEMBER 2020
ಸರಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಶಿಕಾರಿಪುರ ತಾಲೂಕು ಪೊಲೀಸರು ಬಂಧಿಸಿದ್ದಾರೆ. ಕಳ್ಳರಿಂದ 2.64 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಶಿಕಾರಿಪುರ ತಾಲೂಕು ಭದ್ರಾಪುರದ ಕೃಷ್ಣಪ್ಪ ಅಲಿಯಾಸ್ ಬಾಲಕೃಷ್ಣ (60), ನೇರಪ್ಪ (42), ಹೊಸೂರು ಗ್ರಾಮದ ವೀರೇಶ (29) ಮತ್ತು ನ್ಯಾಮತಿ ತಾಲೂಕು ಪಂಚಪ್ಪ (48) ಬಂಧಿತರು. ಇವರಿಂದ 2.64 ಲಕ್ಷ ಮೌಲ್ಯದ 67 ಗ್ರಾಂ ಚಿನ್ನದ ಆಭರಣ, 1.20 ರೂ. ಲಕ್ಷ ಮೌಲ್ಯದ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಹೇಗೆ ಸಿಕ್ಕಿಬಿದ್ದರು ಈ ಕಳ್ಳರು?
ಅಕ್ಟೋಬರ್ 22ರಂದು ತೊಗರ್ಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿ ಹಿಂತಿರುಗುತ್ತಿದ್ದ ಬಸಮ್ಮ ಎಂಬುವವರಿಗೆ ಆರೋಪಿಗಳು ನಕಲಿ ಬಂಗಾರದ ಸರ ಮಾರಾಟ ಮಾಡಿದ್ದರು. ಬಳಿಕ ಬಸಮ್ಮ ಅವರಿಂದ 3500 ರೂ. ನಗದು ಮತ್ತು ಬೆಂಡೋಲೆಗಳನ್ನು ಕಿತ್ತು ಪರಾರಿಯಾಗಿದ್ದರು. ಈ ಸಂಬಂಧ ಶಿಕಾರಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸುತ್ತಿದ್ದ ಪೊಲೀಸರ ಬಲೆಗೆ ಆರೋಪಿಗಳು ಬಿದ್ದಿದ್ದಾರೆ.
ಆರೋಪಿಗಳು ಶಿಕಾರಿಪುರ ಮತ್ತು ಶಿರಾಳಕೊಪ್ಪ ಠಾಣೆ ವ್ಯಾಪ್ತಿಯ ತಲಾ ಒಂದು ಪ್ರಕರಣದಲ್ಲಿ ಬೇಕಾಗಿದ್ದರು.
ಶಿಕಾರಿಪುರ ಉಪ ವಿಭಾಗದ ಹೆಚ್ಚುವರಿ ರಕ್ಷಣಾಧಿಕಾರಿ ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಗುರುರಾಜ್ ಮೈಲಾರ್, ಶಿರಾಳಕೊಪ್ಪ ಠಾಣೆ ಪಿಎಸ್ಐ ಟಿ.ರಮೇಶ್, ಸಿಬ್ಬಂದಿಗಳಾದ ಕೊಟ್ರೇಶಪ್ಪ, ಕಿರಣ್ ಕುಮಾರ್, ಗಿರೀಶ್, ಮಂಜುನಾಥ್, ನಾಗರಾಜ್, ಮಂಜುನಾಯ್ಕ, ರವಿನಾಯ್ಕ, ಕಾಂತೇಶ್, ಶಿಕಾರಿಪುರ ಠಾಣೆ ಸಿಬ್ಬಂದಿಗಳಾದ ಪ್ರಶಾಂತ್, ನಾಗರಾಜ್, ಶಿಕಾರಿಪುರ ಗ್ರಾಮಾಂತರ ಠಾಣೆಯ ವಿನಯ್, ಶಿವಕುಮಾರ್, ಆದರ್ಶ ಅವರು ಕಾರ್ಯಾಚರಣೆ ನಡೆಸಿ ಸರಗಳ್ಳರನ್ನು ಬಂಧಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]