ಪ್ರತಿದಿನ 7 ರಿಂದ 8 ಸಾವಿರ ರೂ. ಲಾಭ, ಮನೆಯಲ್ಲೆ ಕುಳಿತು ಗಳಿಸಬಹುದು ಹಣ, ಮುಂದೇನಾಯ್ತು?

ಶಿವಮೊಗ್ಗ : ಮನೆಯಿಂದಲೆ ಕೆಲಸ (Work) ಮಾಡಿ ಪ್ರತಿದಿನ ಎಳೆಂಟು ಸಾವಿರ ರೂ. ಸಂಪಾದಿಸಬಹುದು ಎಂದು ನಂಬಿಸಿ ಮಹಿಳೆಯೊಬ್ಬರಿಗೆ (ಹೆಸರು ಗೌಪ್ಯ) 53 ಲಕ್ಷ ರೂ. ವಂಚಿಸಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಮಹಿಳೆಯೊಬ್ಬರ ಟೆಲಿಗ್ರಾಂ ಖಾತೆಗೆ ವರ್ಕ್‌ ಫ್ರಮ್‌ ಹೋಮ್‌ ಎಂದು ಮೆಸೇಜ್‌ ಬಂದಿತ್ತು. ಟಾಸ್ಕ್‌ ಪೂರೈಸಿದರೆ ನಿತ್ಯ 7 ರಿಂದ 8 ಸಾವಿರ ರೂ. ಗಳಿಸಬಹುದು ಎಂದು ತಿಳಿಸಲಾಗಿತ್ತು. ಮೆಸೇಜ್‌ನಲ್ಲಿದ್ದ ಲಿಂಕ್‌ ಕ್ಲಿಕ್‌ ಮಾಡಿದ ಮಹಿಳೆಗೆ ಮೊದಲು 10 ಸಾವಿರ ರೂ. ಹೂಡಿಕೆ ಮಾಡುವಂತೆ ತಿಳಿಸಲಾಗಿತ್ತು. ಅಂತೆಯೇ ಮಹಿಳೆ ಹಣ ಹೂಡಿಕೆ ಮಾಡಿ ಟಾಸ್ಕ್‌ ಪೂರೈಸಿದ್ದರು. ಬಳಿಕ ಅವರ ಖಾತೆಗೆ 17,366 ರೂ. ಹಣ ಬಂದಿತ್ತು.

ಎರಡನೇ ಬಾರಿಗೆ 10 ಸಾವಿರ ರೂ. ಹೂಡಿಕೆ ಮಾಡಿ ಟಾಸ್ಕ್‌ (Work) ಪೂರೈಸಿದ ಮಹಿಳೆಯ ಖಾತೆಗೆ 19,623 ರೂ. ಹಣ ಬಂದಿತ್ತು. ಮಹಿಳೆಗೆ ನಂಬಿಕೆ ಮೂಡಿಸಿದ ವಂಚಕರು ಕೊನೆಗೆ ವಿವಿಧ ಹಂತದಲ್ಲಿ 27 ಟಾಸ್ಕ್‌ಗಳನ್ನು ನೀಡಿ, ನಾನಾ ಕಾರಣಗಳನ್ನು ನೀಡಿ 53.17 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದಾರೆ. ಕೊನೆಗೆ ಲಾಭಾಂಶವು ಇಲ್ಲದೆ, ಅಸಲು ಹಣವನ್ನು ಹಿಂತಿರುಗಿಸದೆ ವಂಚಿಸಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದಲ್ಲಿ ಉಚಿತ ಸಮಾಲೋಚನೆ, 40% ರಿಯಾಯಿತಿ Nanjappa Hospital Advertisement ಇಲ್ಲಿ ಕ್ಲಿಕ್‌ ಮಾಡಿ ಹೆಸರು ನೋಂದಾಯಿಸಿ

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ಶಿವಮೊಗ್ಗದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಬೈಕ್‌ ಸವಾರ, ಪೋಷಕರಿಗೆ ಬಿಸಿ ಮುಟ್ಟಿಸಿತು ನ್ಯಾಯಾಲಯ, ಆಗಿದ್ದೇನು?

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment