ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಆಗಸ್ಟ್ 2020
ಬೈಪಾಸ್ ರಸ್ತೆಯ ತುಂಗಾ ಸೇತುವೆ ಮೇಲಿಂದ ಪ್ರಿಯತಮನ ಜೊತೆಗೆ ಹೊಳೆಗೆ ಹಾರಿದ್ದ ಯುವತಿಯು ಸಾವನ್ನಪ್ಪಿದ್ದಾಳೆ. ಹೊಳೆಗೆ ಹಾರಿದ್ದ ಈಕೆಯ ರಕ್ಷಣೆ ಮಾಡಿ, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಯುವತಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಪ್ರೇಮಿಗಳ ಗುರುತು ಪತ್ತೆ
ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳ ಗುರುತು ಪತ್ತೆಯಾಗಿದೆ. ಹುರುಳಿಹಳ್ಳಿಯ ಸಂತೋಷ್ (25), ಕಾಕನಹಸೂಡಿ ಗ್ರಾಮದ ಅನುಷಾ (20) ಎಂದು ಗುರುತಿಸಲಾಗಿದೆ. ಇವರು ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ.
RELATED NEWS | ಚಪ್ಪಲಿ, ಗುಲಾಬಿ ಹೂವು ಇಟ್ಟು ತುಂಗಾ ಸೇತುವೆಯಿಂದ ಹೊಳೆಗೆ ಹಾರಿದ ಪ್ರೇಮಿಗಳು, ಯುವತಿ ರಕ್ಷಣೆ, ಯುವಕನಿಗೆ ಶೋಧ
ಪಿಯುಸಿ ಮುಗಿಸಿದ್ದ ಯುವತಿ
ಅನುಷಾ, ಪಿಯುಸಿ ಪಾಸ್ ಆಗಿದ್ದಳು. ಶಿವಮೊಗ್ಗದ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ. ಈಗ ಸಂತೋಷ್‍ಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಸೇತುವೆ ಬಳಿ ಭಾರಿ ಜನ ಸೇರಿದ್ದಾರೆ. ಹೊಳಿ ಬಳಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]