ಗೋವಾದಲ್ಲಿ ಶಿವಮೊಗ್ಗದ ಇಬ್ಬರು ಯುವಕರು ಆರೆಸ್ಟ್‌, ಕಾರಣವೇನು?

ಗೋವಾ: ಮೊಬೈಲ್ ಹಾಗೂ ವಾಚ್‌ ಕಳ್ಳತನ ಪ್ರಕರಣ ಸಂಬಂಧ ಶಿವಮೊಗ್ಗದ ಇಬ್ಬರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಗೋವಾದ ಕಲಂಗುಟೆ ಪ್ರದೇಶದ ಹಾಲಿಡೇ ವಿಲ್ಲಾ ಒಂದರಲ್ಲಿ ಘಟನೆ ನಡೆದಿತ್ತು.

ಶಿವಮೊಗ್ಗ ಮೂಲದ ಕಿರಣ್ ಮತ್ತು ಅರುಣ್ ಎಂಬುವರನ್ನು ಗೋವಾ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆರೋಪಿಗಳು ವಿಲ್ಲಾದ ಹಿಂಬಾಗಿಲಿನ ಮೂಲಕ ಒಳನುಗ್ಗಿದ್ದರು. ₹90,000 ಮೌಲ್ಯದ ಮೊಬೈಲ್ ಫೋನ್ ಹಾಗೂ ಎರಡು ವಾಚ್‌ಗಳನ್ನು ದೋಚಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಗೋವಾದ ಕಲಂಗುಟೆ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.

Crime-News-General-Image

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ