ಶಿವಮೊಗ್ಗದಲ್ಲಿ ಪರೀಕ್ಷಾ ಕೊಠಡಿಯಿಂದ ಹೊರ ಬಂದು ಬ್ಯಾಗ್‌ಗೆ ಕೈ ಹಾಕಿದ ವಿದ್ಯಾರ್ಥಿನಿಗೆ ಕಾದಿತ್ತು ಆಘಾತ

SHIVAMOGGA LIVE NEWS | 1 MAY 2024 (ಈ ಸುದ್ದಿಯನ್ನು ಇನ್ನು 44 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ಸಿಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯ ಚಿನ್ನ ಸರ ಕಳ್ಳತನವಾಗಿದೆ. ಕಸ್ತೂರ ಬಾ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಶಿಕಾರಿಪುರ ತಾಲೂಕು ತಾಳಗುಂದದ ಸಿಂಚನಾ ಬ್ಯಾಗಿನಲ್ಲಿಟ್ಟಿದ್ದ ಚಿನ್ನದ ಸರ ನಾಪತ್ತೆಯಾಗಿದೆ. ಅಂದಾಜು 44 ಸಾವಿರ ರೂ. ಮೌಲ್ಯದ  10 ಗ್ರಾಂ ತೂಕದ ಸರ ಕಳುವಾಗಿದೆ ಎಂದು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏ.18 ಮತ್ತು 19ರಂದು ಶಿವಮೊಗ್ಗದ ಪರೀಕ್ಷಾ ಕೇಂದ್ರದಲ್ಲಿ ಸಿಂಚನಾ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದಳು. ಪರೀಕ್ಷಾ ಕೊಠಡಿಯೊಳಗೆ ಸರ ಸೇರಿದಂತೆ ಯಾವುದೇ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ ಎಂಬ ನಿಯಮವಿದೆ. ಆದ್ದರಿಂದ ತನ್ನ ಕೊರಳಲ್ಲಿದ್ದ ಚಿನ್ನದ ಸರ ತೆಗೆದು ಬ್ಯಾಗಿನಲ್ಲಿ ಇಟ್ಟಿದ್ದಳು. ಎಲ್ಲ ವಿದ್ಯಾರ್ಥಿಗಳು ಬ್ಯಾಗ್‌ ಇಟ್ಟಿದ್ದ ಸ್ಥಳದಲ್ಲೇ ತನ್ನ ಬ್ಯಾಗ್‌ ಇಟ್ಟಿದ್ದಳು. ಏ.19 ರಂದು ಪರೀಕ್ಷೆ ಮುಗಿಸಿ ಬಂದು ಬ್ಯಾಗಿನಲ್ಲಿ ಪರಿಶೀಲಿಸಿದಾಗ ಚಿನ್ನದ ಸರವಿರಲಿಲ್ಲ. ಪೋಷಕರಿಗೆ ವಿಷಯ ತಿಳಿಸಿ ತಡವಾಗಿ ದೂರು ನೀಡಿದ್ದಾರೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ – ತ್ಯಾಗರ್ತಿಯಲ್ಲಿ ನಟ ದುನಿಯಾ ವಿಜಯ್‌, ಶಿವರಾಜ್‌ ಕುಮಾರ್‌ ಅಬ್ಬರದ ಪ್ರಚಾರ, ಏನೇನು ಹೇಳಿದರು?

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Doddapete-Police-Station.

Leave a Comment