ಬೆಳಗ್ಗೆ ವಾಕಿಂಗ್‌ ಹೋಗುವ ಮಹಿಳೆಯರೆ ಎಚ್ಚರ, ವಿನೋಬನಗರ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ

ಶಿವಮೊಗ್ಗ: ನಗರದ ಸೂರ್ಯ ಬಡಾವಣೆಯಲ್ಲಿ ಬೆಳಗಿನ ಜಾವ ವಾಯುವಿಹಾರಕ್ಕೆ (Morning Walk) ತೆರಳಿದ್ದ ವೃದ್ಧೆಯೊಬ್ಬರ ಕೊರಳಿನಲ್ಲಿದ್ದ ಬಂಗಾರದ ಸರ ಕಿತ್ತುಕೊಂಡು (Chain Snatching) ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕಳ್ಳತನವಾದ ಸರದ ಮೌಲ್ಯ (Market value) ₹2,75,000 ಎಂದು ಅಂದಾಜಿಸಲಾಗಿದೆ.

ಬೈಕಿನಲ್ಲಿ ಬಂದ ಕಳ್ಳರು

ಮೇ 13ರ ಬೆಳಗ್ಗೆ ಇಂದಿರಾ ಎಂಬುವವರು ಸೂರ್ಯ ಬಡಾವಣೆಯಲ್ಲಿ ವಾಕಿಂಗ್‌ ಮಾಡುತ್ತಿದ್ದರು. ಈ ವೇಳೆ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದ ಸುಮಾರು 25 ವರ್ಷದ ಇಬ್ಬರು ಯುವಕರು ಬೈಕ್‌ನಲ್ಲಿ ಬಂದಿದ್ದಾರೆ. ಬೈಕ್‌ನಿಂದ ಇಳಿದ ಒಬ್ಬ ಯುವಕ ವೃದ್ಧೆಯ ಎದುರಿಗೆ ಬಂದು ಏಕಾಏಕಿ ಕೊರಳಲ್ಲಿದ್ದ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತುಕೊಳ್ಳಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

Shivamogga-Police-Jeep

ಸರದ ಅರ್ಧ ಭಾಗ ಕಟ್‌

ಸರಗಳವು ಮಾಡುವಾಗ ಇಂದಿರಾ ಅವರು ಸರವನ್ನು ಎಡಗೈಯಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಇದರಿಂದಾಗಿ ಸ್ವಲ್ಪ ಭಾಗದ ಸರ ಮತ್ತು ಗುಂಡುಗಳು ಅವರ ಕೈಯಲ್ಲೇ ಉಳಿದಿವೆ. ಉಳಿದ ಅರ್ಧ ಭಾಗದ ಸರವನ್ನು ಕಳ್ಳರು ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ (Escaped) ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ (Vinoba Nagar Police Station) ಪ್ರಕರಣ ದಾಖಲಾಗಿದೆ (FIR registered).

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion