ಹೊಳೆ ಬಸ್‌ ನಿಲ್ದಾಣದಲ್ಲಿ KSRTC ಬಸ್‌ ಇಳಿದ ಡಾಕ್ಟರ್‌ಗೆ ಕಾದಿತ್ತು ಆಘಾತ, ಆಗಿದ್ದೇನು?

ಶಿವಮೊಗ್ಗ: ಚನ್ನಗಿರಿಯಿಂದ ಶಿವಮೊಗ್ಗಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ₹2.65 ಲಕ್ಷ ಮೌಲ್ಯದ ಚಿನ್ನದ ಸರ ಕಳ್ಳತನವಾಗಿದೆ. ಈ ಸಂಬಂಧ ವೈದ್ಯೆ ದೂರು ನೀಡಿದ್ದು (ಈ ಸುದ್ದಿಯನ್ನು ಇನ್ನು 41 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ವಿನಾಯಕನಗರದ ಡಾ. ಜ್ಯೋತಿ.ಆರ್‌ ಎಂಬುವವರು 26 ಗ್ರಾಂ ತೂಕದ ಚಿನ್ನದ ಸರದ ಡಿಸೈನ್ ಬದಲಾಯಿಸಲು ಚನ್ನಗಿರಿಯ ವಿಜಯ ಜ್ಯುವೆಲ್ಲರ್ಸ್‌ಗೆ ನೀಡಿದ್ದರು. ಜ್ಯುವೆಲರಿಯವರು 26 ಗ್ರಾಂ ಚಿನ್ನಕ್ಕೆ ಸ್ಟೋನ್ ಸೇರಿಸಿ ಒಟ್ಟು 40 ಗ್ರಾಂ ತೂಕದ ಸರವನ್ನು ಸಿದ್ಧಪಡಿಸಿದ್ದರು. ಅಕ್ಟೋಬರ್ 24 ರಂದು ಡಾ. ಜ್ಯೋತಿ ಅವರು ಚನ್ನಗಿರಿಗೆ ತೆರಳಿ ಜ್ಯುವೆಲ್ಲರಿ ಅಂಗಡಿಯಿಂದ ಚಿನ್ನದ ಸರ ಪಡೆದುಕೊಂಡು, ಅದನ್ನು ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು.

KSRTC-Bus-General-Image-Shimoga-Bangalore

ಮಧ್ಯಾಹ್ನ ಚನ್ನಗಿರಿಯಿಂದ ಶಿವಮೊಗ್ಗಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದರು. ಶಿವಮೊಗ್ಗದ ಹೊಳೆ ಬಸ್ ಸ್ಟಾಪ್ ಬಳಿ ಬಸ್‌ನಿಂದ ಇಳಿದ ಡಾ. ಜ್ಯೋತಿ ಅವರು ಬ್ಯಾಗ್ ಪರಿಶೀಲಿಸಿದರು. ಆಗ ಬ್ಯಾಗ್‌ನಲ್ಲಿದ್ದ ಚಿನ್ನದ ಸರದ ಬಾಕ್ಸ್ ಕಳ್ಳತನ ಆಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Editor JOIN OUR WHATSAPP GROUP