ಶಿವಮೊಗ್ಗದಲ್ಲಿ ₹1.45 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ, ಹೇಗಾಯ್ತು ಕೃತ್ಯ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ವಾಟ್ಸಪ್‌ ಮಾಡಲು ಕೆಳಗಿರುವ ನಂಬರ್‌ ಮೇಲೆ ಕ್ಲಿಕ್‌ ಮಾಡಿ.

ಶಿವಮೊಗ್ಗ: ನಗರದ ನ್ಯೂ ಮಂಡ್ಲಿಯ ಮಿಲಾನ್ ಶಾದಿ ಮಹಲ್ ಹಿಂಭಾಗದ ಮನೆಯೊಂದರ ಬೀಗ ಮುರಿದು ಒಳಗಿದ್ದ ₹1.45 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಡೆದಿದೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಇಲ್ಲಿನ ನಿವಾಸಿ ಸೈಯದ್ ಸಿದ್ದಿಕಾ (39) ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಸೈಯದ್‌ ಸಿದ್ದಿಕಾ ಅವರು ತಮ್ಮ ಮಕ್ಕಳು ಜೊತೆಗೆ ತಾಯಿಯ ಮನೆಗೆ ಹೋಗಿದ್ದರು. ಮರುದಿನ ಅಂದರೆ ಸಂಜೆ ಮನೆಗೆ ವಾಪಸ್ಸಾದಾಗ ಬಾಗಿಲಿನ ಬೀಗ ಮುರಿದಿರುವುದು ಬೆಳಕಿಗೆ ಬಂದಿದೆ.

Doddapete-Police-Station-Shimoga

##ಏನೇನೆಲ್ಲ ಕಳ್ಳತನವಾಗಿದೆ?

ಕಳ್ಳರು ಬಾಗಿಲಿನ ಚಿಲಕ ಮುರಿದು ಒಳನುಗ್ಗಿರುವ ಕಳ್ಳರು, ಹಾಲ್‌ನಲ್ಲಿದ್ದ ಬೀರುವಿನ ಬಾಗಿಲು ತೆರೆದಿದ್ದಾರೆ. ಅದರಲ್ಲಿದ್ದ ₹45 ಸಾವಿರ ಮೌಲ್ಯದ 16 ಗ್ರಾಂ ತೂಕದ ಒಂದು ತಾಳಿ ಚೈನ್, ತಲಾ ₹30 ಸಾವಿರ ಮೌಲ್ಯದ ಮೂರು ಜೋಡಿ ಕಿವಿ ಓಲೆ ಮತ್ತು 11.5 ಗ್ರಾಂನ ಮತ್ತೊಂದು ಜೊತೆ ಓಲೆ, ₹20 ಸಾವಿರ ಮೌಲ್ಯದ 8 ಗ್ರಾಂ ತೂಕದ ಲಾಕೆಟ್ ಇರುವ ತಾಳಿ ಚೈನ್ ಹಾಗೂ ₹20 ಸಾವಿರ ಮೌಲ್ಯದ 6 ಗ್ರಾಂ ತೂಕದ ಮೂರು ಚಿನ್ನದ ಉಂಗುರಗಳು ಸೇರಿದಂತೆ ಒಟ್ಟು 51.5 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!