ಚಿನ್ನದ ಗಟ್ಟಿ ಕೊಂಡೊಯ್ದ ನೌಕರ, ಮನೆ ಬಳಿ ಹೋಗಿ ಫೋನ್‌ ಮಾಡಿದ ಮಾಲೀಕನಿಗೆ ಕಾದಿತ್ತು ಆಘಾತ

SHIVAMOGGA LIVE NEWS, 16 JANUARY 2025

ಶಿವಮೊಗ್ಗ : ಆಭರಣ ಮಾಡಿಕೊಡುವುದಾಗಿ ನಂಬಿಸಿ ಚಿನ್ನದ (Gold) ಗಟ್ಟಿ ಪಡೆದಿದ್ದ ವ್ಯಕ್ತಿ ನಾಪತ್ತೆಯಾಗಿದ್ದು, ಮೊಬೈಲ್‌ ಫೋನ್‌ ಸ್ವಚ್‌ ಆಫ್‌ ಆಗಿದೆ ಎಂದು ಆರೋಪಿಸಿ ಚಿನ್ನಾಭರಣ ವ್ಯಾಪಾರಿಯೊಬ್ಬರು ದೂರು ನೀಡಿದ್ದಾರೆ.

ಚಿನ್ನಾಭರಣ ವ್ಯಾಪಾರಿ ದತ್ತಾತ್ರೇಯ ಎಂಬುವವರ ಬಳಿ ರಾಹುಲ್‌ ಅಲಿಯಾಸ್‌ ಚಟ್ಟು ಪರಮಾಣಿಕ್‌ ಎಂಬಾತ ಕಳೆದ ಅಕ್ಟೋಬರ್‌ನಲ್ಲಿ 22.51 ಲಕ್ಷ ರೂ. ಮೌಲ್ಯದ 280 ಗ್ರಾಂ ಚಿನ್ನದ ಗಟ್ಟಿ ಪಡೆದುಕೊಂಡಿದ್ದ. ಪಶ್ಚಿಮ ಬಂಗಾಳದ ರಾಹುಲ್‌ ಶಿವಮೊಗ್ಗದ ಧರ್ಮರಾಯನ ಕೇರಿಯಲ್ಲಿ ವಾಸವಾಗಿದ್ದು, ಚಿನ್ನಾಭರಣ ಕೆಲಸ ಮಾಡುತ್ತಿದ್ದ. ಇದೇ ಕಾರಣಕ್ಕೆ ದತ್ತಾತ್ರೇಯ ಚಿನ್ನದ ಗಟ್ಟಿ ನೀಡಿದ್ದರು.

Abhishek-padavidhara-sahakara-sanga

ಮರುದಿನ ರಾಹುಲ್‌ ಮನೆ ಬಳಿಗೆ ಹೋದಾಗ ಬಾಗಿಲಿಗೆ ಬೀಗ ಹಾಕಲಾಗಿತ್ತು. ಕರೆ ಮಾಡಿದಾಗ ತುರ್ತು ಕಾರ್ಯದ ನಿಮಿತ್ತ ಕೋಲ್ಕತ್ತಾಗೆ ತೆರಳಿರುವುದಾಗಿ ತಿಳಿಸಿದ್ದ. ಅಲ್ಲದೆ ಮರಳಿ ಬಂದು ಚಿನ್ನಾಭರಣ ಮಾಡಿಕೊಡುವುದಾಗಿ ನಂಬಿಸಿದ್ದ. ಈಗ ಆತನ ಮೊಬೈಲ್‌ ನಂಬರ್‌ ಸ್ವಿಚ್‌ ಆಫ್‌ ಬಂದ ಹಿನ್ನೆಲೆ ಆತಂಕಗೊಂಡ ದತ್ತಾತ್ರೇಯ ಅವರು ದೂರು  ನೀಡಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kalleshwara-Enterprises.webp

ಶಿವಮೊಗ್ಗದಲ್ಲಿ ಬೃಹತ್‌ ಕಾರು ಎಕ್ಸ್‌ಚೇಂಜ್‌ ಮೇಳ, ಎಲ್ಲಿ? ಇಲ್ಲಿದೆ ಡಿಟೇಲ್ಸ್‌

toyota-exchange-mela-

ಇದನ್ನೂ ಓದಿ » ಕಾರು ಪ್ರಿಯರಿಗೆ ಗುಡ್‌ ನ್ಯೂಸ್‌, ಶಿವಮೊಗ್ಗದಲ್ಲಿ ಬೃಹತ್‌ ಕಾರು ಎಕ್ಸ್‌ಚೇಂಜ್‌ ಮೇಳ, ಎಲ್ಲಿ? ಏನೆಲ್ಲ ಆಫರ್‌ಗಳಿವೆ?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment