ಪಿತೃಪಕ್ಷದ ಪೂಜೆಗೆ ಇರಿಸಿದ್ದ ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ನಾಪತ್ತೆ, ಆಗಿದ್ದೇನು?

ಶಿವಮೊಗ್ಗ: ಪಿತೃಪಕ್ಷದ ಪೂಜೆಗೆ ಇರಿಸಿದ್ದ ₹23 ಲಕ್ಷ ಮೌಲ್ಯದ 249 ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿದೆ. ಮನೆಗೆ ಬಣ್ಣ ಬಳಿಯಲು ಬಂದಿದ್ದ ಪೇಂಟರ್‌ಗಳ ಮೇಲೆಯೇ ಅನುಮಾನ ವ್ಯಕ್ತಪಡಿಸಿ ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. (ಈ ಸುದ್ದಿಯನ್ನು ಇನ್ನು 61 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ವಿನೋಬನಗರದ ಬಸವರಾಜಪ್ಪ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. ಪಿತೃಪಕ್ಷದ ಪೂಜೆಗೆ ಮಗ, ಸೊಸೆ ಹಾಗೂ ಮೊಮ್ಮಕ್ಕಳು ಬಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Vinobanagara-Police-Station-Shimoga

ಅಕ್ಟೋಬರ್ 10ರ ರಾತ್ರಿ ಪಿತೃಪಕ್ಷದ ಪೂಜೆ ನೆರವೇರಿಸಿದ ನಂತರ ಪೂಜೆಗೆ ಇಟ್ಟಿದ್ದ 50 ಗ್ರಾಂ ತೂಕದ 2 ಎಳೆಯ ಮುತ್ತಿನ ಬಂಗಾರದ ಸರ, 32 ಗ್ರಾಂ ಹಾಗೂ 25 ಗ್ರಾಂ ತೂಕದ ಪೆಂಡೆಂಟ್ ಹೊಂದಿರುವ ಬಂಗಾರದ ಸರಗಳು, 50 ಗ್ರಾಂ, 44 ಗ್ರಾಂ ಹಾಗೂ 40 ಗ್ರಾಂ ತೂಕದ ಮೂರು ಜೊತೆ ಬಂಗಾರದ ಬಳೆಗಳು ಮತ್ತು 8 ಗ್ರಾಂ ತೂಕದ ಕಿವಿ ಓಲೆ ಸೇರಿದಂತೆ ಒಟ್ಟು 249 ಗ್ರಾಂ ತೂಕದ ಚಿನ್ನಾಭರಣಗಳನ್ನು ಬಸವರಾಜಪ್ಪ ಅವರ ಪತ್ನಿ ಪರ್ಸ್‌ನಲ್ಲಿಟ್ಟು ಬೀರುವಿನಲ್ಲಿ ಇಡುವ ಬದಲು ಬೆಡ್‌ರೂಮ್‌ನ ವಾರ್ಡ್‌ರೋಬ್ ಡ್ರಾನಲ್ಲಿ ಇರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 18 ರಂದು ಸಾಗರಕ್ಕೆ ತೆರಳಲು ವಾರ್ಡ್‌ರೋಬ್ ತೆರೆದು ನೋಡಿದಾಗ ಆಭರಣಗಳಿದ್ದ ಪರ್ಸ್ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಪೂಜೆಯ ನಂತರ ಮೂರು ದಿನಗಳ ಕಾಲ ಮನೆಗೆ ಬಣ್ಣ ಬಳಿಯುವ ಕೆಲಸ ನಡೆದಿತ್ತು. ಈ ವೇಳೆ ಹೊರಗಿನವರು ಯಾರೂ ಮನೆಗೆ ಬಂದಿರಲಿಲ್ಲ. ಆದ್ದರಿಂದ ಪೇಂಟಿಂಗ್ ಕೆಲಸ ಮಾಡಿದವರ ಮೇಲೆಯೇ ಅನುಮಾನವಿದೆ ಎಂದು ದೂರಿನಲ್ಲಿ ಅರೋಪಿಸಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Editor JOIN OUR WHATSAPP GROUP