ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಫೆಬ್ರವರಿ 2022
ಹರ್ಷನನ್ನು ಹತ್ಯೆ ಮಾಡಿದ್ದು ಯಾರು ಅನ್ನುವುದು ಗೊತ್ತಿಲ್ಲ. ಆದರೆ ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಿ. ಜಯರಾಮ್ ಶ್ರೀರಾಮ್ ಎಂದು ಹೇಳಿಕೊಂಡೆ ಹೋದ ಎಂದು ಹತ್ಯೆಗೀಡಾದ ಹರ್ಷನ ಸಹೋದರಿ ಅಶ್ವಿನಿ ಅಳಲು ತೋಡಿಕೊಂಡಿದ್ದಾರೆ.
ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಿನಿ ಅವರು, ನಾನು ಚಿಕ್ಕಮಗಳೂರಿನಲ್ಲಿ ಇದ್ದೆ. ಫೋನ್ ಮಾಡಿ ನಿನ್ನ ತಮ್ಮನನ್ನು ಹೊಡೆದು ಹಾಕಿದ್ದಾರೆ ಎಂದರು. ವಾಟ್ಸಪ್’ನಲ್ಲಿ ವಿಡಿಯೋ, ಫೋಟೊ ಕಳುಹಿಸಿದರು. ಈಗ ನಾವು ಯಾರ ಬಳಿ ನ್ಯಾಯ ಕೇಳೋಣ ಎಂದರು.
ಹರ್ಷ ಯಾರಿಗೂ ತೊಂದರೆ ಮಾಡಿದವನಲ್ಲ. ಜಯರಾಮ್ ಶ್ರೀರಾಮ ಅಂದುಕೊಂಡೆ ಹೋದ. ಹತ್ಯೆ ಮಾಡಿದವರು ಯಾರು ಅನ್ನುವುದು ನಮಗೆ ಗೊತ್ತಿಲ್ಲ. ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿಸಿ. ಹರ್ಷಾ ಹಿಂದೂ ಎಂದು ಹೆಸರಿಟ್ಟುಕೊಂಡಿದ್ದೆ ತಪ್ಪಾ ಎಂದು ಅಶ್ವಿನಿ ಪ್ರಶ್ನಿಸಿದ್ದಾರೆ.
ಗೃಹ ಸಚಿವರಿಗೆ ಮನವಿ
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹರ್ಷನ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಈ ಸಂದರ್ಭ ತಮ್ಮ ಸಹೋದರನ ಸಾವಿಗೆ ನ್ಯಾಯ ಕೊಡಿಸುವಂತೆ ಅಶ್ವಿನಿ ಅವರು ಮನವಿ ಮಾಡಿದರು.
ಇದನ್ನೂ ಓದಿ | ‘ಕೊಲೆ ಆರೋಪಿಗಳ ಸುಳಿವು ಪತ್ತೆ, ಸದ್ಯದಲ್ಲೇ ಅರೆಸ್ಟ್’
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






