ಭದ್ರಾವತಿ ಕಾರೇಹಳ್ಳಿ ಸರ್ಕಲ್’ನಲ್ಲಿ ಹಿಟ್ ಅಂಡ್ ರನ್ ಪ್ರಕರಣ, ಪಾದಚಾರಿಗೆ ಹಿಂದಿನಿಂದ ಗುದ್ದಿದ ವಾಹನ

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 26 ಆಗಸ್ಟ್ 2021

ಕೆಲಸ ಮುಗಿಸಿಕೊಂಡು ನಡೆದುಕೊಂಡು ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಿಂದಿನಿಂದ ವಾಹನವೊಂದು ಗುದ್ದಿದೆ. ಅಪಘಾತದಲ್ಲಿ ಪಾದಚಾರಿಗೆ ಗಂಭೀರ ಗಾಯವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಭದ್ರಾವತಿ ತಾಲೂಕು ಕಾರೇಹಳ್ಳಿ ಸರ್ಕಲ್’ನಲ್ಲಿ ಘಟನೆ ಸಂಭವಿಸಿದೆ. ಕಾರೇಹಳ್ಳಿ ಗ್ರಾಮದಲ್ಲಿರುವ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯೇಸುದಾಸ್ ಅವರಿಗೆ ವಾಹನ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾಲು, ತಲೆಗೆ ಗಾಯವಾಗಿದೆ.

ವಾಹನ ನಿಲ್ಲಿಸದೆ ಪರಾರಿ

ಯೇಸುದಾಸ್ ಅವರಿಗೆ ಗುದ್ದಿದ ವಾಹನ ಸ್ಥಳದಿಂದ ಪಾರಾರಿಯಾಗಿದೆ. ವಾಹನ ಚಾಲಕ ಯೇಸುದಾಸ್ ಅವರ ಪರಿಸ್ಥಿತಿಯನ್ನು ಗಮನಿಸಿದೆ, ಅವರು ರಸ್ತೆ ಮೇಲೆ ಬಿದ್ದಿದ್ದರೂ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ | ಬಾರಂದೂರು ಬಳಿ ಭೀಕರ ಅಪಘಾತ, ಸೀಟ್’ನಲ್ಲೇ ಸಿಕ್ಕಿಬಿದ್ದು ಚಾಲಕ ಸಾವು

ಪೇಪರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಾಹನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

AVvXsEjg6pSNP zPCKJ5AxskZbTphiAhyel8fkc4QBzDJ3X lXVeTsL46xZ6FlCL5ds0KHqOlW9yBTC84uYdxkpBTdLwxJa4VlU2AqXFSSBQgyLEl J0I1zv W3nFahKNjFVkZKVnr3mc2N1pP21fIRcS 9W6EJOOmt15rlSAzJoQ

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

Bhadravathi News Graphics

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment