ಹರಿಗೆಯಲ್ಲಿ ಮನೆ ಬಳಿ ನಿಲ್ಲಿಸಿದ್ದ ಬೈಕ್‌ ಮಿಸ್ಸಿಂಗ್‌, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಹರಿಗೆಯ ಚಿಲಕಾದ್ರಿಹಳ್ಳಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಸುಮಾರು ₹15,000 ಮೌಲ್ಯದ ಹೋಂಡಾ ಆಕ್ಟೀವಾ ಬೈಕ್‌ ಕಳ್ಳತನವಾಗಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಪ್ರಸನ್ನ ಎಂಬುವವರು ಬೆಳಿಗ್ಗೆ ತಮ್ಮ ಮನೆಯ ಮುಂದೆ ಹೋಂಟಾ ಆಕ್ಟೀವಾ ಬೈಕ್‌ ನಿಲ್ಲಿಸಿ ತೆರಳಿದ್ದರು. ಅದೇ ದಿನ ರಾತ್ರಿ ಬಂದು ನೋಡಿದಾಗ ದ್ವಿಚಕ್ರ ವಾಹನ ಕಳುವಾಗಿರುವುದು ಗೊತ್ತಾಗಿದೆ. ಸಹೋದರರು ಕೊಂಡೊಯ್ದಿರಬಹುದು ಎಂದು ಭಾವಿಸಿ ಪ್ರಸನ್ನ ಅವರು ಸುಮ್ಮನಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೊನೆಗೆ ಕಳ್ಳತನವಾಗಿರುವುದು ಗೊತ್ತಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime-News-General-Image