ಬಸ್‌ ಇಳಿದು ಸವಳಂಗ ರಸ್ತೆಯ ಫುಟ್‌ಪಾತ್‌ ಬಳಿ ಬಂದ ವ್ಯಕ್ತಿಗೆ ಕಾದಿತ್ತು ಶಾಕ್‌, ಆಗಿದ್ದೇನು?

ಶಿವಮೊಗ್ಗ: ಜೆಎನ್‌ಎನ್‌ ಕಾಲೇಜು ಮುಂದೆ ಫುಟ್‌ಪಾತ್‌ನಲ್ಲಿ ನಿಲ್ಲಿಸಿದ್ದ ಹೋಂಡಾ ಆಕ್ಟೀವಾ ಬೈಕ್‌ ಕಳ್ಳತನವಾಗಿದೆ. ನವುಲೆಯ ಶಾಂತವೀರಪ್ಪ.ಕೆ ಎಂಬುವವರಿಗೆ ಸೇರಿದ ವಾಹನ ನಾಪತ್ತೆಯಾಗಿದೆ.

ಶಾಂತವೀರಪ್ಪ ಅವರು ಹೋಂಡಾ ಆಕ್ಟೀವಾವನ್ನು ಕಾಲೇಜಿನ ಎಂಸಿಎ ಬ್ಲಾಕ್‌ ಎದುರು ಸವಳಂಗ ರಸ್ತೆಯ ಫುಟ್‌ಪಾತ್‌ ಮೇಲೆ ನಿಲ್ಲಿಸಿ ಬಸ್ಸಿನಲ್ಲಿ ಬೆಳಗುತ್ತಿಗೆ ತೆರಳಿದ್ದರು. ಸಂಜೆ ಮರಳಿದಾಗ ಬೈಕ್‌ ನಾಪತ್ತೆಯಾಗಿದೆ. ಎಲ್ಲೆಡೆ ಹುಡುಕಾಡಿದ ಶಾಂತವೀರಪ್ಪ ತಡವಾಗಿ ದೂರು ನೀಡಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

crime name image