ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನಗರದ ರವೀಂದ್ರನಗರದ ಸ್ವಾಮಿ ವಿವೇಕಾನಂದ ಶಾಲೆಯ ಮುಂಭಾಗದ ರಸ್ತೆಯಲ್ಲಿ ಹಾರ್ನ್ (horn dispute) ವಿಚಾರವಾಗಿ ನಡೆದ ಕ್ಷುಲ್ಲಕ ಗಲಾಟೆಯು ವಿಕೋಪಕ್ಕೆ ತಿರುಗಿ, ಕಾರ್ ಚಾಲಕನೊಬ್ಬ ಬೈಕ್ ಸವಾರ ಮತ್ತು ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಶಿಪುರದ ಆರ್ಮುಗಂ (52) ಎಂಬುವವರು ತಮ್ಮ ತಮ್ಮನ ಮಗಳನ್ನು ಶಾಲೆಗೆ ಬಿಟ್ಟು ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಚಾನಲ್ ಕಡೆಯಿಂದ ವೇಗವಾಗಿ ಬಂದ ಕಾರು ಹಾರ್ನ್ ಮಾಡದೆಯೇ ಹಾದು ಹೋಗಿದೆ. ಈ ವೇಳೆ ಆರ್ಮುಗಂ ಅವರು ಹಾರ್ನ್ ಮಾಡಬಾರದೆ ಎಂದು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಕಾರು ಚಾಲಕ, ದೂರುದಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮುಖ ಮತ್ತು ಎದೆಗೆ ಗುದ್ದಿದ್ದಾನೆ. ಹಲ್ಲೆಯ ತೀವ್ರತೆಗೆ ಆರ್ಮುಗಂ ಅವರ ದವಡೆ ಹಲ್ಲು ಮುರಿದಿದ್ದು, ಮೈ ಕೈಗೆ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸಿದ ಬಳಿಕ ಕಾರ್ಮಿಕನಿಗೆ ರಕ್ತವಾಂತಿ, ಸಾವು
ಸ್ಥಳಕ್ಕೆ ಬಂದ ಆರ್ಮುಗಂ ಅವರ ಪತ್ನಿ ಸರಸ್ವತಿ ಅವರು ಹಲ್ಲೆಯನ್ನು ಪ್ರಶ್ನಿಸಿದಾಗ, ಆರೋಪಿಯು ಕಾರನ್ನು ನಿಲ್ಲಿಸದೆ ಚಲಾಯಿಸಿದ್ದರಿಂದ ಅವರು ಕೂಡ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ತಿಲಿಸಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಅಂಗನವಾಡಿ ಸಹಾಯಕಿ ಅನುಮಾನಾಸ್ಪದ ಸಾವು ಕೇಸ್, ಆರೋಪಿ ಅರೆಸ್ಟ್

- ಮನೆ, ಅಡಿಕೆ ಮರಳಗಳ ಸುತ್ತಲು ಟ್ರಂಚ್ ನಿರ್ಮಿಸುತ್ತಿದ್ದ ಅರಣ್ಯ ಇಲಾಖೆಗೆ MLA ವಾರ್ನಿಂಗ್

- ಮೈಸೂರು – ತಾಳಗುಪ್ಪ ರೈಲುಗಳ ಕುರಿತು ಮಹತ್ವದ ಅಪ್ಡೇಟ್

- ಚಂದ್ರಗುತ್ತಿ ಜಾತ್ರೆ, ಮಹತ್ವದ ಆದೇಶ ಹೊರಡಿಸಿದ ಶಿವಮೊಗ್ಗ ಜಿಲ್ಲಾಧಿಕಾರಿ, ಏನದು?

- ಉಚಿತ ಆಯುರ್ವೇದ ಚಿಕಿತ್ಸೆ ನೆಪ, ಶಿವಮೊಗ್ಗದ ಮತ್ತೂರಿನಲ್ಲಿ ಮಹಾ ವಂಚನೆ, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






