ಮನೆಯ ಹಿಂಬಾಗಿಲ ಬೀಗ ಮುರಿದು ಅರ್ಧ ಗಂಟೆಯೊಳಗೆ ಹಣ, ಚಿನ್ನಾಭರಣ ಕಳ್ಳತನ

ಶಿವಮೊಗ್ಗ ಲೈವ್.ಕಾಂ | SAGARA NEWS | 21 ಸೆಪ್ಟೆಂಬರ್ 2021

ಮನೆಯ ಹಿಂದಿನ ಬಾಗಿಲಿಗೆ ಹಾಕಿದ್ದ ಬೀಗ ಒಡೆದು, ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಲಾಗಿದೆ.

ಸಾಗರ ತಾಲೂಕು ಗೆಣಸಿನಕುಣಿ ಗ್ರಾಮದ ಮಂಜುನಾಥ ಜೋಗಿ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಲೆಯಲ್ಲಿ ಘಟನೆ ಸಂಭವಿಸಿದೆ.

ಅರ್ಧ ಗಂಟೆಯಲ್ಲಿ ಕಳ್ಳತನ

ಮಂಜುನಾಥ ಜೋಗಿ ಅವರ ಮಗ ಶಿವಮೊಗ್ಗದಲ್ಲಿ ಸೈಟ್ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಗರಕ್ಕೆ ಬಂದ ಮಗನನ್ನು ಕರೆತರಲು ಮಂಜುನಾಥ ಜೋಗಿ ಅವರು ಹೆಂಡತಿ ಮತ್ತು ಮಗಳೊಂದಿಗೆ ರಾತ್ರಿ 9 ಗಂಟೆಗೆ ತೆರಳಿದ್ದರು.

LifeSpring%2BKan%2B02

ಅರ್ಧ ಗಂಟೆಯಲ್ಲಿ ಮನೆಗೆ ವಾಪಸ್ ಬಂದಿದ್ದಾರೆ. ಅಷ್ಟರೊಳಗೆ ಕಳ್ಳರು ಮನೆಯ ಹಿಂದಿನ ಕಬ್ಬಿಣದ ಬಾಗಿಲಿನ ಬೀಗ ಒಡೆದು ಕಳ್ಳತನ ಮಾಡಿದ್ದಾರೆ. ಮನೆಯಲ್ಲಿದ್ದ ಎರಡು ಬೀರುಗಳ ಬಾಗಿಲು ಒಡೆದು, ಲಾಕರ್’ನಲ್ಲಿದ್ದ ಹಣ, ಚಿನ್ನಾಭರಣ ದೋಚಿದ್ದಾರೆ.

ಬೀರುವಿನಲ್ಲಿ ಇಟ್ಟಿದ್ದ 80 ಸಾವಿರ ರೂ. ನಗದು, 10 ಗ್ರಾಂ ತೂಕದ ಎರಡು ಬಂಗಾರದ ಚೈನ್, ಒಂದು ಬಂಗಾರದ ಪೆಂಡೆಂಟ್, 6 ಜೊತೆ ಬೆಳ್ಳಿ ಕಾಲುಂಗುರ, 4 ಜೊತೆ ಬೆಳ್ಳಿ ಕಾಲು ಚೈನ್, 2 ಬೆಳ್ಳಿ ಉಂಗುರವನ್ನು ಕಳ್ಳತನ ಮಾಡಲಾಗಿದೆ.

ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ ಮೂಲಕ ಸುದ್ದಿಗಾಗಿ 7411700200

theft case general image

Leave a Comment