ಜಗಳವಾಡುತ್ತಲೇ ಹೆಂಡತಿಗೆ ಇರಿದ ಗಂಡ, ಚಾಕು ಸಹಿತ ಪೊಲೀಸ್ ಸ್ಟೇಷನ್’ಗೆ ಬಂದ, ಘಟನೆಗೇನು ಕಾರಣ ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 3 ಜನವರಿ 2020

ಕೌಟುಂಬಿಕ ಕಲಹದಿಂದಾಗಿ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶಿವಮೊಗ್ಗದ ಮಿಳಘಟ್ಟದಲ್ಲಿ ಘಟನೆ ನಡೆದಿದೆ. ಆರ್ಮುಗಂ ಎಂಬಾತ ತನ್ನ ಪತ್ನಿ ಅಂಜಲಿಗೆ ಚಾಕು ಇರಿದಿದ್ದಾನೆ. ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿ ಅವರನ್ನು ಆಕೆಯ ತಂದೆ ಪೂಮಲೈ, ಅಕ್ಕಪಕ್ಕದ ಮನೆಯವರ ನೆರವಿನೊಂದಿಗೆ ಕೂಡಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಂಜಲಿ ಸ್ಥಿತಿ ಗಂಭೀರವಾಗಿದೆ. ಘಟನೆ ಬಳಿಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೇಗಾಯ್ತು ಘಟನೆ? ಕಾರಣವೇನು?

ಆರ್ಮುಗಂ ತನ್ನ ಪತ್ನಿ ಅಂಜಲಿ ಜೊತೆಗೆ ಜಗಳವಾಡಿ, ಥಳಿಸುತ್ತಿದ್ದಾನೆ ಎಂದು ಅಕ್ಕಪಕ್ಕದ ಮನೆಯವರು ಅಂಜಲಿ ತಂದೆ ಪೂಮಲೈಗೆ ತಿಳಿಸಿದ್ದಾರೆ. ಈ ವೇಳೆಗಾಗಲೇ ಮನೆ ಬಾಗಿಲು ಹಾಕಿಕೊಂಡಿದ್ದ ಆರ್ಮುಗಂ ಪತ್ನಿಗೆ ಥಳಿಸುತ್ತಿದ್ದ. ‘ನಾನು ಮನೆಗೆ ಹೋದಾಗ ಬಾಗಿಲು ಹಾಕಿದ್ದ. ತೆಗೆಯುವಂತೆ ಹೇಳಿದರು ಕೇಳಲಿಲ್ಲ. ನನ್ನ ಕಣ್ಮುಂದೆಯೇ ಚಾಕು ತೆಗೆದುಕೊಂಡು ಮೂರ್ನಾಲ್ಕು ಬಾರಿ ಇರಿದುಬಿಟ್ಟ’ ಎಂದು ಪೂಮಲೈ ಘಟನೆಯನ್ನು ವಿವರಿಸಿದ್ದಾರೆ.

ಮಗಳನ್ನು ರಕ್ಷಿಸಿ, ಆಸ್ಪತ್ರೆಗೆ ರವಾನೆ

ಚಾಕು ಇರಿಯುತ್ತಿದ್ದಂತೆ ಸ್ಥಳೀಯರ ನೆರವಿನೊಂದಿಗೆ ಬಾಗಿಲು ಮುರಿದು ಒಳಗೆ ಹೋದ ಪೂಮಲೈ, ಆರ್ಮುಗಂನಿಂದ ಮಗಳನ್ನು ರಕ್ಷಿಸಿದ್ದಾರೆ. ಕೂಡಲೇ ಆಂಬುಲೆನ್ಸ್ ಕರೆಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲದೆ ಘಟನೆ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಚಾಕು ಜೊತೆಗೆ ಆರ್ಮುಗಂ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

Doddapete Police Station General Image 1 1

ತಮಿಳುನಾಡಿನಿಂದ ತಂದಿದ್ದ ಚಾಕು

ಆರ್ಮುಗಂ ತಮಿಳುನಾಡಿನಿಂದ ಚಾಕು ತಂದಿದ್ದ ಎಂದು ಅಂಜಲಿ ತಂದೆ ಪೂಮಲೈ ಆರೋಪಿಸಿದ್ದಾರೆ. ‘ಕಳೆದ ತಿಂಗಳು ತಮಿಳುನಾಡಿಗೆ ತೆರಳಿದ್ದ. ಆಗಲೇ ಚಾಕು ತಂದಿದ್ದ. ಅದನ್ನ ಪೇಪರ್’ನಲ್ಲಿ ಮುಚ್ಚಿಟ್ಟಿದ್ದ. ನನ್ನ ಕಣ್ಮುಂದೆಯೇ ಆ ಚಾಕು ತೆಗೆದು ಚುಚ್ಚಿದ್ದಾನೆ’ ಎಂದು ಆರೋಪಿಸಿದ್ದಾರೆ. ಈ ನಡುವೆ ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದ ಆರ್ಮುಗಂ ದೊಡ್ಡಪೇಟೆ ಪೊಲೀಸ್ ಠಾಣೆಗೆ ಬಂದಿದ್ದಾನೆ. ಚಾಕುವನ್ನು ಪೊಲೀಸರ ಮುಂದಿಟ್ಟು ಘಟನೆ ವಿವರಿಸಿ ಶರಣಾಗಿದ್ದಾನೆ.

ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು, ಅಂಜಲಿ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.  

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 3, 2020

Leave a Comment