ಶಿವಮೊಗ್ಗದ 6 ಕಡೆ ಲೋಕಾಯುಕ್ತ ದಾಳಿ, ಅಧಿಕಾರಿ ಶೋಭಾ ಬಳಿ ಏನೇನೆಲ್ಲ ಸಿಕ್ತು? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗ: ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ.ಕೆ.ಆರ್‌ ಅವರಿಗೆ ಸಂಬಂಧಿಸಿದ ಆರು ಕಡೆಗಳಲ್ಲಿ ಇವತ್ತು ಲೋಕಾಯುಕ್ತ ದಾಳಿ ನಡೆಸಲಾಯಿತು. ದಾಳಿ ಮುಕ್ತಾಯವಾಗಿದ್ದು, ₹3.88 ಕೋಟಿ ಮೌಲ್ಯದ ಆದಾಯಕ್ಕು ಮೀರಿದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ (Lokayukta) ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಈ ಸುದ್ದಿಯನ್ನು ಇನ್ನು 40 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶೋಭಾ ಬಳಿ ಏನೇನೆಲ್ಲ ಪತ್ತೆಯಾಯ್ತು?

okayukta-Raid-Shobha-in-Shimoga-district.

ಲೋಕಾಯುಕ್ತ ದಾಳಿ ವೇಳೆ ಶೋಭಾ ಅವರ ಬಳಿ 2 ನಿವೇಶನ, 1 ವಾಸದ ಮನೆ, 4.08 ಎಕರೆ ಕೃಷಿ ಜಮೀನು ಪತ್ತೆಯಾಗಿದೆ. ಇವುಗಳ ಮೌಲ್ಯ ₹1,76,38,000 ಎಂದು ಅಂದಾಜಿಸಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

okayukta-Raid-Shobha-in-Shimoga-district.

ಇನ್ನು ₹1,63,500 ನಗದು, 57,40,000 ಮೌಲ್ಯದ ಚಿನ್ನಾಭರಣ, ₹1,23,20,000 ಮೌಲ್ಯದ ವಾಹನಗಳು, ₹30,21,435 ಮೌಲ್ಯದ ಇತರೆ ವಸ್ತುಗಳು ಪತ್ತೆಯಾಗಿವೆ. ಚರ ಆಸ್ತಿಯ ಒಟ್ಟು ಮೌಲ್ಯ ₹2,12,44,935 ಎಂದು ಅಂದಾಜಿಸಲಾಗಿದೆ. ಅದಾಯಕ್ಕು ಮೀರಿದ ಆಸ್ತಿ ಪತ್ತೆಯಾದ ಹಿನ್ನೆಲೆ ಶಿವಮೊಗ್ಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಕೆಎಎಸ್‌ ಅಧಿಕಾರಿ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ, ಆಗಿದ್ದೇನು?

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment