ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA REPORT, 21 OCTOBER 2024 : ದ್ವಿಚಕ್ರ ವಾಹನ ಶೋ ರೂಂನಲ್ಲಿ (Showroom) ಅಗ್ನಿ ಅವಘಡ ಸಂಭವಿಸಿದೆ. ಮಾಜಿ ಉದ್ಯೋಗಿಯೇ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ಎನ್.ಟಿ.ರಸ್ತೆ ಜಂಕ್ಷನ್ನಲ್ಲಿರುವ ಕಾರ್ತಿಕ್ ಮೋಟರ್ಸ್ ಶೋ ರೂಂನಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಬೆಂಕಿಯಿಂದಾಗಿ ಶೋ ರೂಂನಲ್ಲಿ ಕೆಲವು ವಾಹನಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಒಳಾಂಗಣ ವಿನ್ಯಾಸ ಸುಟ್ಟು ಹೋಗಿದೆ. ಬೆಂಕಿ ಆವರಿಸುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮೂರ್ನಾಲ್ಕು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು. ಇನ್ನು, ಬೆಂಕಿ ಹೊತ್ತಿಕೊಂಡ ವಿಷಯ ತಿಳಿಯುತ್ತಿದ್ದಂತೆ ಶೋ ರೂಂ ಮುಂಭಾಗ ದೊಡ್ಡ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಹಾಗಾಗಿ ಎನ್.ಟಿ.ರಸ್ತೆ ಮತ್ತು ಬೈಪಾಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಸಂಚಾರ ಠಾಣೆ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹರಸಾಹಸ ಪಡಬೇಕಾಯಿತು.
ಮಾಜಿ ಉದ್ಯೋಗಿ ಪೊಲೀಸ್ ವಶಕ್ಕೆ
ಇನ್ನು, ಮಾಜಿ ಉದ್ಯೋಗಿಯೇ ಶೋ ರೂಂಗೆ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ಓರ್ವ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಆತನ ವಿಚಾರಣ ನಡೆಯುತ್ತಿದೆ.
ಲಕ್ಷಾಂತರ ರೂ. ನಷ್ಟ
ಘಟನೆಯಿಂದಾಗಿ ಕಾರ್ತಿಕ್ ಮೋಟರ್ಸ್ ಶೂಂನಲ್ಲಿ ದೊಡ್ಡ ಮಟ್ಟದ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ. ಒಳಾಂಗಣ ವಿನ್ಯಾಸ, ಕೆಲವು ವಾಹನಗಳು, ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೀಡಾಗಿವೆ. ಮೇಲ್ನೋಟಕ್ಕೆ ಲಕ್ಷಾಂತರ ರೂ. ನಷ್ಟವಾಗಿರುವುದು ಗೋಚರಿಸುತ್ತದೆ. ನಷ್ಟದ ಅಂದಾಜು ಇನ್ನಷ್ಟೆ ಆಗಬೇಕಿದೆ.
ಇದನ್ನೂ ಓದಿ » ಸೇತುವೆ ಮೇಲೆ ನೀರು, ಯಡವಾಲ – ಹಿಟ್ಟೂರು ರಸ್ತೆ ಸಂಚಾರ ಬಂದ್
ಇನ್ನು, ಬೆಳಗ್ಗೆ ಕೆಲಸಕ್ಕೆ ಬಂದ ಶೋ ರೂಂ ಸಿಬ್ಬಂದಿ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿ ದಿಗ್ಭ್ರಾಂತರಾಗಿ ಹೊರಗೆ ನಿಂತಿದ್ದರು. ಶೋ ರೂಂ ಒಳಗಿದ್ದ ವಾಹನಗಳನ್ನು ತಕ್ಷಣಕ್ಕೆ ಹೊರಗೆ ತಂದು ನಿಲ್ಲಿಸಿ ಹಾನಿ ಪ್ರಮಾಣ ಕಡಿಮೆ ಮಾಡಿದ್ದಾರೆ.