ಶಿರಸಿಯಲ್ಲಿ ಶಿವಮೊಗ್ಗ, ಚನ್ನಗಿರಿಯ ಮಹಿಳೆಯರು ಅರೆಸ್ಟ್‌, ಯಾಕೆ?

ಶಿವಮೊಗ್ಗ ಲೈವ್‌.ಕಾಂ | ಶಿರಸಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ವ್ಯಾನಿಟಿ ಬ್ಯಾಗ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಅಂತರ ಜಿಲ್ಲೆಯ ಇಬ್ಬರು ಮಹಿಳೆಯರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Arrest News Graphics

ಶಿವಮೊಗ್ಗದ ಸುಶೀಲಾ ಸುರೇಶ (39) ಹಾಗೂ ಚನ್ನಗಿರಿಯ ಸಾಯಿಲಕ್ಷ್ಮೀ ಪ್ರಭುದಾಸ (36) ಬಂಧಿತರು. ಬಸ್ ನಿಲ್ದಾಣದಲ್ಲಿ ಬ್ಯಾಗ್‌ನ ಜಿಪ್ ತೆಗೆದು ಸುಮಾರು ₹3.52 ಲಕ್ಷ ಮೌಲ್ಯದ ಬಂಗಾರದ ನೆಕ್ಲೆಸ್, ಹಾರ, ಉಂಗುರ ಹಾಗೂ ಬೆಳ್ಳಿ ನಾಣ್ಯವನ್ನು ಕಳವು ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದು, ಆರೋಪಿಗಳಿಂದ ₹5 ಲಕ್ಷ ಮೌಲ್ಯದ 50 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಉತ್ತರ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾರ್ಗದರ್ಶನದಲ್ಲಿ ಪಿಎಸ್‌ಐ ನರಸಿಂಹಲು ಟಿ. ಹಾಗೂ ನಾರಾಯಣ ರಾಠೋಡ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.