ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 1 DECEMBER 2023
SHIMOGA : ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದ್ದು (Theft) ಮನೆಗೆ ಪೇಂಟ್ ಮಾಡಲು ಬಂದಿದ್ದವರ ಮೇಲೆ ಅನುಮಾನವಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. 4.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ಆರೋಪಿಸಲಾಗಿದೆ.
ವಿವೇಕಾನಂದ ಬಡಾವಣೆಯ ಚಂದ್ರಾವತಿ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ನ.9ರಂದು ಬೀರುವಿನಲ್ಲಿದ್ದ ಬಂಗಾರದ ಚೈನ್ ಮತ್ತು ಉಂಗುರ ನಾಪತ್ತೆಯಾಗಿತ್ತು. ನ.11ರಂದು ಬಂಗಾರದ ಬಳೆಗಳು, ಚೈನ್ ಮತ್ತು ಕಿವಿ ಓಲೆಗಳು ಕಳುವಾಗಿತ್ತು((Theft)). ಚಂದ್ರಾವತಿ ಅವರ ಮಗನ ಮದುವೆ ಸಮಾರಂಭ ಇದ್ದಿದ್ದರಿಂದ ಅವರು ತಡವಾಗಿ ದೂರು ದಾಖಲಿಸಿದ್ದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ-ಅಡಿಕೆ ಕಳ್ಳರು ಅರೆಸ್ಟ್, ಪತ್ತೆಯಾಯ್ತು 300 ರಬ್ಬರ್ ಶೀಟ್, ಏನಿದು ಕೇಸ್? ಯಾರಿದು ಆರೋಪಿಗಳು?
ಪೇಂಟರ್‌ಗಳ ಮೇಲೆ ಶಂಕೆ
ಮದುವೆ ಹಿನ್ನೆಲೆ ಮನೆಗೆ ಪೇಂಟ್ ಮಾಡಿಸಲಾಗಿತ್ತು. ಈ ಕೆಲಸಕ್ಕೆ ಬೊಮ್ಮನಕಟ್ಟೆಯ ವ್ಯಕ್ತಿ ಮತ್ತು ಆತನ ಜೊತೆಗೆ ಇತರೆ ಮೂವರು ಬಂದಿದ್ದರು. ಅವರೆ ಚಿನ್ನಾಭರಣ ಕಳ್ಳತನ ಮಾಡಿರಬಹುದು ಎಂಬ ಶಂಕೆ ಇದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






