ಯುವತಿಯರಿಗೆ ಸಾಫ್ಟ್‌ವೇರ್‌ ಕಂಪನಿಯಿಂದ ಆಫರ್‌ ಲೆಟರ್‌, ಕೆಲಸಕ್ಕೆ ಸೇರಲು ಹೋದಾಗ ಕಾದಿತ್ತು ಆಘಾತ

ಶಿವಮೊಗ್ಗ: ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದ ಯುವತಿ ಮತ್ತು ಆಕೆಯ ಸ್ನೇಹಿತೆಯರಿಗೆ ಒಟ್ಟು ₹5 ಲಕ್ಷ ವಂಚಿಸಲಾಗಿದೆ.

ಯುವತಿ ಮತ್ತು ಆಕೆಯ ಸ್ನೇಹಿತೆಯರು ವಿದ್ಯಾಭ್ಯಾಸ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದರು. ಈ ವೇಳೆ ಯುವತಿಯನ್ನು ವಾಟ್ಸಪ್‌ ಮೂಲಕ ಸಂಪರ್ಕಿಸಿದ ವ್ಯಕ್ತಿಯೊಬ್ಬ ತಾನು ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯೊಂದರ ಮಾನವ ಸಂಪನ್ಮೂಲ (HR) ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆ ಕೊಡಿಸುವುದಾಗಿ ನಂಬಿಸಿ, ಯುವತಿ ಮತ್ತು ಆಕೆಯ ಮೂವರು ಸ್ನೇಹಿತೆಯರಿಂದ ಹಂತಹಂತವಾಗಿ ಒಟ್ಟು ₹5 ಲಕ್ಷ ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.

SMS-Fraud-Shimoga-CEN-Police-Station.

ಹಣ ಪಡೆದು ಆರೋಪಿಯು ನಕಲಿ ಇಂಟರ್‌ವ್ಯು ಮಾಡಿ ಆಫರ್‌ ಲೆಟರ್‌ ಅನ್ನು ವಾಟ್ಸಪ್‌ಗೆ ಕಳುಹಿಸಿದ್ದ. ಇದನ್ನು ನಂಬಿದ ಯುವತಿಯರು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಸಾಫ್ಟ್‌ವೇರ್‌ ಕಂಪನಿಗೆ ಕೆಲಸಕ್ಕೆ ಹಾಜರಾಗಲು ಹೋಗಿದ್ದರು. ಆಗ ಸಾಫ್ಟ್‌ವೇರ್‌ ಕಂಪನಿಯ ಭದ್ರತಾ ಸಿಬ್ಬಂದಿ ಆಫರ್‌ ಲೆಟರ್‌ ಪರಿಶೀಲಿಸಿದಾಗ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಶಿವಮೊಗ್ಗದ ಸೈಬರ್‌ ಕ್ರೈಮ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp