ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 MARCH 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸಿದ್ಲೀಪುರದಲ್ಲಿ ಹುಲ್ಲಿನ ಬಣವೆಗೆ ಬೆಂಕಿ
HOLEHONNURU : ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 280 ಪೆಂಡಿ ಹುಲ್ಲು ಸುಟ್ಟು ಹೋಗಿದೆ. ಸಿದ್ಲೀಪುರ ಗ್ರಾಮದ ಜಯಮ್ಮ ಹನುಮಂತಪ್ಪ ಎಂಬುವವರಿಗೆ ಸೇರಿದ ಹುಲ್ಲಿನ ಬಣವೆಗೆ ಬೆಂಕಿ ಹೊತ್ತುಕೊಂಡಿತ್ತು. ಕೂಡಲೆ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರು. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. 70 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಕಮಲಾಪುರದಲ್ಲಿ ಹುಲ್ಲು, ಭತ್ತ ಭಸ್ಮ
SORABA : ಬೆಂಕಿ ತಗುಲಿ ಭತ್ತದ ಹುಲ್ಲಿನ ಪೆಂಡಿಗಳು, ಭತ್ತ ಸಂಪೂರ್ಣ ನಾಶವಾಗಿದೆ. ಚಂದ್ರಗುತ್ತಿ ಸಮೀಪದ ಕಮಲಾಪುರ ಗ್ರಾಮದ ನಾಗರಾಜ ಮತ್ತು ಶೇಖರ ಎಂಬುವವರ ಜಮೀನಿನ ಪಕ್ಕದಲ್ಲಿ ತರಗೆಲೆಗಳಿಗೆ ಯಾರೋ ಹಚ್ಚಿದ ಬೆಂಕಿ ಇವರ ಜಮೀನನ್ನು ಆವರಿಸಿದೆ. ನಾಗರಾಜ ಅವರಿಗೆ ಸೇರಿದ ಹುಲ್ಲಿನ 2 ಸಾವಿರ ಪೆಂಡಿ, 10 ಕ್ವಿಂಟಾಲ್ ಭತ್ತ ಹಾಗೂ ಶೇಖರ ಅವರಿಗೆ ಸೇರಿದ ಹುಲ್ಲಿನ ಒಂದು ಸಾವಿರ ಪೆಂಡಿ ಭಸ್ಮವಾಗಿವೆ.
ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ
TALAGUPPA : ಆಲಳ್ಳಿ ಸಮೀಪದ ಕಾಡಿನಲ್ಲಿ ಶುಕ್ರವಾರ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕುಮಟಾ ಮೂಲದ ಉಪೇಂದ್ರ (45) ಮೃತರು. ಇವರ ಕುಟುಂಬದವರು ಸಿದ್ದಾಪುರದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಸಾಗರ ಗ್ರಾಮಾಂತರ ಠಾಣೆಯುಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಗಂಡನೊಂದಿಗೆ ಜಗಳದ ವೇಳೆ ಹೆಂಡತಿಗೆ ಗಂಭೀರ ಗಾಯ, ಸಾವು