ಶಿವಮೊಗ್ಗ: ಶಾಪಿಂಗ್ ಸಂಸ್ಥೆ ನಾಪ್‌ಟೋಲ್ ಹೆಸರಿನಲ್ಲಿ ಬಂದ ಲಕ್ಕಿ ಡ್ರಾ ಪತ್ರ ನಂಬಿ ಕೃಷಿಕರೊಬ್ಬರು ₹4.04 ಲಕ್ಷ ಹಣ ಕಳೆದುಕೊಂಡಿದ್ದಾರೆ. (ಈ ಸುದ್ದಿಯನ್ನು ಇನ್ನು 36 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಕೃಷಿಕರೊಬ್ಬರ (ಹೆಸರು ಗೌಪ್ಯ) ಮನೆಗೆ ನಾಪ್‌ಟೋಲ್ ಕಂಪನಿ ಹೆಸರಿನಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಪತ್ರವೊಂದು ಬಂದಿತ್ತು. ಪತ್ರದಲ್ಲಿ ಲಕ್ಕಿ ಡ್ರಾನಲ್ಲಿ ₹12.80 ಲಕ್ಷ ಬಹುಮಾನ ಬಂದಿರುವುದಾಗಿ ತಿಳಿಸಲಾಗಿತ್ತು. ಪತ್ರದಲ್ಲಿದ್ದ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ವಿಚಾರಿಸಿದಾಗ, ಬಹುಮಾನದ ಹಣ ಪಡೆಯಲು ಪ್ರೊಸೆಸಿಂಗ್ ಶುಲ್ಕವಾಗಿ ₹12,800 ಪಾವತಿಸುವಂತೆ ಸೂಚಿಸಲಾಗಿತ್ತು. ಅವರ ಮಾತು ನಂಬಿದ ಕೃಷಿಕ ಮೊದಲಿಗೆ ಹಣ ವರ್ಗಾಯಿಸಿದ್ದರು.

ಬಳಿಕ ವಂಚಕರು ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ ಹಾಗೂ ಕಾರ್ಪೊರೇಟ್ ತೆರಿಗೆ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು ₹4,04,600 ಪಾವತಿಸಿಕೊಂಡಿದ್ದಾರೆ. ಹಣ ನೀಡಿದರೂ ಬಹುಮಾನದ ಮೊತ್ತ ಖಾತೆಗೆ ಜಮೆಯಾಗದಿದ್ದಾಗ ಅನುಮಾನಗೊಂಡ ಕೃಷಿಕ ವಿಚಾರಿಸಿದಾಗ ಮೋಸ ಹೋಗಿರುವುದು ತಿಳಿದುಬಂದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
JOB NEWS
