ಶಿವಮೊಗ್ಗ ಜೈಲಿನಿಂದ ಕರೆ ಮಾಡಿ ಪತ್ನಿಗೆ ಬೆದರಿಕೆ ಒಡ್ಡಿದ ಖೈದಿ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIMOGA NEWS, 15 OCTOBER 2024 : ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಿಂದ (Jail) ತನ್ನ ಪತಿ ಕರೆ ಮಾಡಿ ಜೀವ ಬೆದರಿಕೆ ಒಡ್ಡುತ್ತಿದ್ದಾನೆ. ಹಣಕ್ಕೆ ಒತ್ತಾಯಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ ಜೈಲಿನಿಂದ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿರುವ ಖೈದಿ ನಾಗರಾಜ ತನ್ನ ಪತ್ನಿಗೆ ಜೈಲಿನಿಂದಲೇ ಕರೆ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. 2024ರ ಮಾರ್ಚ್‌ ತಿಂಗಳಿಂದ ಹಲವು ಭಾರಿ ಕರೆ ಮಾಡಿ ಒಂದು ಸಾವಿರ, ಎರಡು ಸಾವಿರದಂತೆ ಹಣ ಹಾಕುವಂತೆ ಒತ್ತಾಯಿಸುತ್ತಿದ್ದಾನೆ. ಹಣ ಹಾಕದಿದ್ದಲ್ಲಿ ಜೈಲಿನಿಂದ ಹೊರ ಬಂದ ನಂತರ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿ ಆತನ ಪತ್ನಿ ದೂರು ನೀಡಿದ್ದಾಳೆ.

ಇದನ್ನೂ ಓದಿ » ಶಿವಮೊಗ್ಗ ಜೈಲು, ಬೀಡಿಗಾಗಿ ಕಲ್ಲು ತೂರಾಟ, ಸ್ಥಳದಲ್ಲೆ ಡಿಐಜಿ ಮೊಕ್ಕಾಂ, ಅಧೀಕಕ್ಷರು ಬದಲಾವಣೆ

ಬೆಂಗಳೂರು ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾಥಿತ್ಯ ಆರೋಪದ ಬೆನ್ನಿಗೆ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭ ಮೊಬೈಲ್‌ ಚಾರ್ಜರ್‌ಗಳು ಲಭ್ಯವಾಗಿದ್ದವು ಎಂದು ಪ್ರಕರಣ ದಾಖಲಾಗಿತ್ತು.

PACE-COLLEGE-ADVT

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment