ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 APRIL 2024
SHIMOGA : ಆನ್ಲೈನ್ ರಿವ್ಯು ನೀಡಿ ಹಣ ಸಂಪಾದಿಸಬಹುದು ಎಂದು ನಂಬಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ 4.17 ಲಕ್ಷ ರೂ. ವಂಚಿಸಲಾಗಿದೆ. ವಾಟ್ಸಪ್ ಮತ್ತು ಟೆಲಿಗ್ರಾಂ ಮೂಲಕ ಮಾಹಿತಿ ನೀಡಿ, ಹಣ ವರ್ಗಾಯಿಸಿಕೊಳ್ಳಲಾಗಿದೆ.
ಆಗಿದ್ದೇನು?
ಶಿವಮೊಗ್ಗದ ವ್ಯಕ್ತಿಗೆ (ಹೆಸರು ಗೌಪ್ಯ) ವಾಟ್ಸಪ್ನಲ್ಲಿ ಹೆಚ್ಸಿಎಲ್ ಟೆಕ್ನಾಲಜಿಗೆ ರಿವ್ಯು ನೀಡಿದರೆ 150 ರೂ. ಹಣ ಸಿಗಲಿದೆ ಎಂದು ಮೆಸೇಜ್ ಬಂದಿತ್ತು. ಬಳಿಕ ಲಾಭಾಂಶದ ಆಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಮೊದಲು 2 ಸಾವಿರ ರೂ. ಹಣ ವರ್ಗಾಯಿಸಿದ್ದರು. ಅವರಿಗೆ 2800 ರೂ. ಹಣ ಮರಳಿತ್ತು. ಬಳಿಕ ಟೆಲಿಗ್ರಾಂ ಗ್ರೂಪ್ ಒಂದಕ್ಕೆ ಶಿವಮೊಗ್ಗದ ವ್ಯಕ್ತಿಯನ್ನು ಸೇರಿಸಿಕೊಳ್ಳಲಾಗಿತ್ತು. ಹೆಚ್ಚಿನ ಲಾಭಾಂಶದ ಆಸೆ ಮೂಡಿಸಿ, ಹಂತ ಹಂತವಾಗಿ 4.17 ಲಕ್ಷ ರೂ. ಹೂಡಿಕೆ ಮಾಡಿಕೊಂಡಿದ್ದರು. ಆದರೆ ಯಾವುದೆ ಹಣ ಮರಳಿರಲಿಲ್ಲ.
ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಮನೆ ತಲುಪುವ ಹೊತ್ತಿಗೆ ಎದುರಿಗೆ ಬಂತು ಬೈಕ್, LBS ನಗರದಲ್ಲಿ ಕೇಸ್, ಮಹಿಳೆಯರೆ ಹುಷಾರ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422