ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 5 AUGUST 2024 : ಪಾರ್ಟ್ ಟೈಮ್ ಕೆಲಸದ (Job) ಆಮಿಷವೊಡ್ಡಿ ಇನ್ಷುರೆನ್ಸ್ ಕಂಪನಿಯೊಂದರ ಏರಿಯಾ ಮ್ಯಾನೇಜರ್ಗೆ 23.61 ಲಕ್ಷ ರೂ. ವಂಚಿಸಲಾಗಿದೆ. ಹೆಚ್ಚಿನ ಲಾಭಾಂಶದ ಆಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಸಿಕೊಂಡು ಬಳಿಕ ಹಣವನ್ನು ಹಿಂತಿರುಗಿಸಿಲ್ಲ.
ಏರಿಯಾ ಮ್ಯಾನೇಜರ್ (ಹೆಸರು ಗೌಪ್ಯ) ಮೊಬೈಲ್ನಲ್ಲಿದ್ದ ಟೆಲಿಗ್ರಾಂ ಅಪ್ಲಿಕೇಷನ್ಗೆ ಪಾರ್ಟ್ ಟೈಮ್ ಜಾಬ್ ಕುರಿತು ಮೆಸೇಜ್ ಬಂದಿತ್ತು. ಟಾಸ್ಕ್ಗಳನ್ನು ಪೂರೈಸಿದರೆ ಹಣ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಮೊದಲಿಗೆ ಅಮೆಜಾನ್, ಫ್ಲಿಪ್ಕಾರ್ಟ್ನಲ್ಲಿ ಪ್ರಾಡೆಕ್ಟ್ ರಿವ್ಯು ಮಾಡುವಂತೆ ಸೂಚಿಸಲಾಗಿತ್ತು. ಆ ಬಳಿಕ ಏರಿಯಾ ಮ್ಯಾನೇಜರ್ ಬ್ಯಾಂಕ್ ಖಾತೆಗೆ 968 ರೂ. ನಗದು ಬಂದಿತ್ತು.
ಹಾಗಾಗಿ ಏರಿಯಾ ಮ್ಯಾನೇಜರ್, ಮುಂದಿನ ಟಾಸ್ಕ್ಗಳತ್ತ ಆಸಕ್ತಿ ತೋರಿದ್ದರು. ಮುಂದಿನ ಟಾಸ್ಕ್ಗಳಿಗೆ ಹಣ ಪಾವತಿಸಬೇಕು ಎಂದು ಸೂಚಿಸಲಾಗಿತ್ತು. ಹೆಚ್ಚಿನ ಲಾಭಾಂಶದ ಆಸೆಗೆ ಏರಿಯಾ ಮ್ಯಾನೇಜರ್ ಹೆಚ್ಚು ಹಣ ಹೂಡಿಕೆ ಮಾಡಿದ್ದರು. ಕೊನೆಗೆ ಲಾಭಾಂಶವು ಇಲ್ಲದೆ, ಪಾವಿತಿಸಿದ 23.61 ಲಕ್ಷ ರೂ. ಹಣವು ಮರಳಿ ಕೊಡಲಿಲ್ಲ. ವಂಚನೆಗೊಳಗಾದ ಅರಿವಾಗುತ್ತಿದ್ದಂತೆ ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ ⇓
ತಳಿರು ತೋರಣದಿಂದ ಅಲಂಕಾರ, ಪಟಾಕಿ ಸಿಡಿಸಿ ಸಂಭ್ರಮ, ಊರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422