BREAKING NEWS | ಶಿವಮೊಗ್ಗದಲ್ಲಿ ಪೊಲೀಸರಿಂದ ಫೈರಿಂಗ್, ಕುಖ್ಯಾತ ರೌಡಿ ಮಾರ್ಕೆಟ್ ಲೋಕಿ ಕಾಲಿಗೆ ಗುಂಡು

ಶಿವಮೊಗ್ಗ ಲೈವ್.ಕಾಂ | SHIMOGA | 12 ಫೆಬ್ರವರಿ 2020

ಶಿವಮೊಗ್ಗದಲ್ಲಿ ಮತ್ತೆ ಪೊಲೀಸರು ಬಂದೂಕು ಸದ್ದು ಮಾಡಿದೆ. ಕುಖ್ಯಾತ ರೌಡಿ ಶೀಟರ್ ಮಾರ್ಕೆಟ್ ಲೋಕಿ ಮೇಲೆ ಫೈರಿಂಗ್ ಮಾಡಿದ್ದಾರೆ.

Resizer 15815149998510 1581515235267 1

ಮಾರ್ಕೆಟ್ ಲೋಕಿ ಎಡಗಾಲಿಗೆ ಗುಂಡು ತಗುಲಿದೆ. ಶಿವಮೊಗ್ಗ ತಾಲೂಕು ಅಬ್ಬಲಗೆರೆ ಬಳಿ ಮಾರ್ಕೆಟ್ ಲೋಕಿ ಇರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.

ಈ ವೇಳೆ ಪೊಲೀಸರು ಫೈರಿಂಗ್ ಮಾಡಿದ್ದು, ಮಾರ್ಕೆಟ್ ಲೋಕಿ ಎಡಗಾಲಿಗೆ ಗುಂಡು ತಗುಲಿದೆ.

ಘಟನೆಯಲ್ಲಿ ಪೊಲೀಸ್ ಪೇದೆ ಒಬ್ಬರಿಗು ಗಾಯವಾಗಿದೆ. ದೊಡ್ಡಪೇಟೆ ಠಾಣೆ ಪೇದೆ ಕಿರಣ್ ಮೋರೆಗೆ ಗಾಯವಾಗಿದೆ. ಕಿರಣ್ ಅವರ ಬಲಗಾಲು ಮತ್ತು ಬಲಗೈಗೆ ಗಾಯವಾಗಿದೆ.
ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : February 12, 2020 at 7:23 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಫೆಬ್ರವರಿ 12, 2020

Leave a Comment