ಶಿವಮೊಗ್ಗದ ಮೊಬೈಲ್‌ ಶೋ ರೂಂನಲ್ಲಿ ₹31 ಲಕ್ಷದ ಫೋನ್‌ಗಳು ಕಳ್ಳತನ, ಹೇಗಾಯ್ತು ಕೃತ್ಯ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ಬಿ.ಹೆಚ್. ರಸ್ತೆಯಲ್ಲಿರುವ ದೀಪಕ್ ಪೆಟ್ರೋಲ್ ಬಂಕ್ ಪಕ್ಕದ ಯುನಿಲೆಟ್ ಅಪ್ಲೈಯನ್ಸ್ ಮಳಿಗೆಯ ಶೆಟರ್ ಬೀಗ ಮುರಿದು, ಲಕ್ಷಾಂತರ ರುಪಾಯಿ ಮೌಲ್ಯದ ವಿವಿಧ ಕಂಪನಿಗಳ ಹೊಸ ಮೊಬೈಲ್‌ಗಳನ್ನು ಕಳ್ಳರು ದೋಚಿದ್ದಾರೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಜುಲೈ 21ರ ರಾತ್ರಿ ಮಳಿಗೆಗೆ ಬೀಗ ಹಾಕಿ ಸಿಬ್ಬಂದಿ ತೆರಳಿದ್ದರು. ಮರುದಿನ ಬೆಳಿಗ್ಗೆ ಸಿಬ್ಬಂದಿ ಕೆಲಸಕ್ಕೆ ಬಂದಾಗ ಶೆಟರ್‌ನ ಬೀಗ ಮುರಿದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಒಳಗೆ ಹೋಗಿ ಪರಿಶೀಲಿಸಿದಾಗ, ಮಾರಾಟಕ್ಕೆಂದು ಜೋಡಿಸಿದ್ದ ಹೊಸ ಮೊಬೈಲ್‌ಗಳ ಬಾಕ್ಸ್‌ಗಳ ಕವರ್‌ಗಳನ್ನು ಕೆಳಗೆ ಬಿಸಾಡಿ, ಫೋನ್‌ಗಳನ್ನು ಕಳವು ಮಾಡಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Police-Jeep-With-Light-New.

ಯಾವೆಲ್ಲ ಮೊಬೈಲ್‌ ಕಳ್ಳತನವಾಗಿವೆ?

  • ಐಫೋನ್ 17, 17 ಪ್ರೋ, 17 ಪ್ರೋ ಮ್ಯಾಕ್ಸ್, 16 ಹಾಗೂ 15 ಮಾಡೆಲ್‌ಗಳ ಒಟ್ಟು 20 ಐಫೋನ್‌ಗಳು ಕಳ್ಳತನವಾಗಿವೆ. ಇವುಗಳ ಅಂದಾಜು ಮೌಲ್ಯ ₹20,28,900.
  • ಒಪ್ಪೋ ರೆನೋ 15 ಪ್ರೋ, ರೆನೋ 16 ಹಾಗೂ ಎಫ್‌ 33 ಸರಣಿಯ ಒಟ್ಟು 12 ಮೊಬೈಲ್‌ಗಳು ಕಳುವಾಗಿವೆ. ಇವುಗಳ ಮೌಲ್ಯ ₹7,72,980 ಎಂದು ಅಂದಾಜಿಸಲಾಗಿದೆ.
  • ವಿವೋ 70 ಹಾಗೂ ವಿವೋ 70ಎಫ್‌ಇ ಸೇರಿದಂತೆ ವಿವಿಧ ಮಾಡೆಲ್‌ಗಳ ಒಟ್ಟು 8 ಮೊಬೈಲ್‌ಗಳು ನಾಪತ್ತೆಯಾಗಿವೆ. ಇವುಗಳ ಮೌಲ್ಯ ₹3,94,983 ಆಗಿದೆ.

ವಿವಿಧ ಕಂಪನಿಗಳ ಒಟ್ಟು 40 ಹೊಸ ಮೊಬೈಲ್ ಫೋನ್‌ಗಳು ಸೇರಿ ಒಟ್ಟು ₹31,95,946 ಮೌಲ್ಯದ ಸೊತ್ತು ಕಳ್ಳತನವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.