ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 14 JULY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಟ್ರಾನ್ಸ್ಪೋರ್ಟ್ ಕಚೇರಿ ಮುಂಭಾಗ ನಿಲ್ಲಿಸಿದ್ದ ವಾಹನದ ಡ್ಯಾಶ್ ಬೋರ್ಡ್ನಲ್ಲಿ ಹಣ (Money) ಕಳ್ಳತನ ಮಾಡಿದ್ದ ಆರೋಪಿಯನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೊಸಮನೆ ಬಡಾವಣೆಯ ನರಸಿಂಹಮೂರ್ತಿ ಬಂಧಿತ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಕಳ್ಳತನ ಆಗಿದ್ದು ಹೇಗೆ?
ಕೋಣಂದೂರಿನ ತಿಮ್ಮಪ್ಪ ಎಂಬುವವರು ಗೂಡ್ಸ್ ವಾಹನದಲ್ಲಿ ಶಿವಮೊಗ್ಗದಿಂದ ಕೋಣಂದೂರಿಗೆ ಪಾರ್ಸಲ್ ಕೊಂಡೊಯ್ಯುವ ವ್ಯವಹಾರ ನಡೆಸುತ್ತಿದ್ದಾರೆ. ಮೇ 9ರಂದು ಸವಾರ್ಲೈನ್ ರಸ್ತೆಯ ವಿಆರ್ಎಲ್ ಸಂಸ್ಥೆಯಲ್ಲಿ ಪಾರ್ಸಲ್ ಕೊಂಡೊಯ್ಯಲು ಬಂದಿದ್ದರು. ಈ ಸಂದರ್ಭ ನರಸಿಂಹಮೂರ್ತಿ ಎಂಬಾತ ಸಿಕ್ಕಿದ್ದು, ಆತನೊಂದಿಗೆ ಮಾತನಾಡಿದ್ದಾರೆ. ತಿಮ್ಮಪ್ಪ ವಿಆರ್ಎಲ್ ಕಚೇರಿ ಒಳ ಹೋದಾಗ ನರಸಿಂಹಮೂರ್ತಿ ವಾಹನದ ಡ್ಯಾಶ್ ಬೋರ್ಡ್ನಲ್ಲಿದ್ದ 1.50 ಲಕ್ಷ ರೂ. ಹಣ ಕಳ್ಳತನ ಮಾಡಿದ್ದ. ಸಿಸಿಟಿವಿ ಪರಿಶೀಲಿಸಿದಾಗ ನರಸಿಂಹಮೂರ್ತಿ ಕಳವು ಮಾಡಿರುವುದು ಗೊತ್ತಾಗಿತ್ತು.
ಆರೋಪಿ ಅರೆಸ್ಟ್, ಹಣ ಸೀಜ್
ದೊಡ್ಡಪೇಟೆ ಠಾಣೆ ಇನ್ಸ್ಪೆಕ್ಟರ್ ರವಿ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಪಿಎಸ್ಐ ನಾಗರಾಜ್, ಸಿಬ್ಬಂದಿ ಪಾಲಾಕ್ಷ ನಾಯ್ಕ, ನಾಗರಾಜ್, ಪಾಲಾಕ್ಷ ನಾಯ್ಕ, ಲಚ್ಚಾನಾಯ್ಕ್, ಚಂದ್ರನಾಯ್ಕ, ಗುರುನಾಯ್ಕ, ನಿತಿನ್, ಪುನೀತ್ ರಾವ್ ಮತ್ತು ಪ್ರಕಾಶ್ ಅವರನ್ನು ಒಳಗೊಂಡ ತಂಡ ಆರೋಪಿ ನರಸಿಂಹಮೂರ್ತಿಯನ್ನು ಬಂಧಿಸಿದೆ. ಆತನಿಂದ 1.30 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ ⇓
ಶಿವಮೊಗ್ಗ KSRTC ನಿಲ್ದಾಣದಲ್ಲಿ ಕಳ್ಳತನ ಕೇಸ್, ಭದ್ರಾವತಿಯ 5 ಮಹಿಳೆಯರು ಅರೆಸ್ಟ್