ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ವ್ಯಕ್ತಿಯೊಬ್ಬರ ಎರಡು ಬ್ಯಾಂಕ್ ಖಾತೆಗಳಿಂದ ₹3.26 ಲಕ್ಷ ಹಣವನ್ನು ಅವರಿಗೆ ಗೊತ್ತಿಲ್ಲದಂತೆ ವರ್ಗಾವಣೆ (Money Transfer) ಮಾಡಿಕೊಳ್ಳಲಾಗಿದೆ. ಹೊರ ರಾಜ್ಯದ ಪ್ರವಾಸದಲ್ಲಿದ್ದ ಅವರು ತಮ್ಮ ತಂದೆ ಮೂಲಕ ಶಿವಮೊಗ್ಗದಲ್ಲಿ ಬ್ಯಾಂಕ್ ಪಾಸ್ ಬುಕ್ ಎಂಟ್ರಿ ಮಾಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಶಿವಮೊಗ್ಗದ ವ್ಯಕ್ತಿಯ ಎಸ್ಬಿಐ ಬ್ಯಾಂಕ್ ಖಾತೆಯಿಂದ ಐದು ಬಾರಿ ಒಟ್ಟು ₹84,500 ಹಣ ವರ್ಗಾಯಿಸಿಕೊಳ್ಳಲಾಗಿದೆ. ಹೆಚ್ಡಿಎಫ್ಸಿ ಬ್ಯಾಂಕ್ ಖಾತೆಯಿಂದ ₹2.41 ಲಕ್ಷ ಹಣವನ್ನು ಬೇರೊಂದು ಖಾತೆ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ. ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ಹಣ ವರ್ಗಾವಣೆಯಾದ ದಿನದ ಹಿಂದಿನ ದಿನ ಶಿವಮೊಗ್ಗದ ವ್ಯಕ್ತಿಗೆ ಹಲವು ಸ್ಪ್ಯಾಮ್ ಕಾಲ್ಗಳನ್ನು ಬಂದಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ ದಸರಾಗೆ ವೈಭವದ ಚಾಲನೆ, ಹೇಗಿತ್ತು ನಾಡದೇವಿಯ ಮೆರವಣಿಗೆ? ಇಲ್ಲಿದೆ ಉದ್ಘಾಟನಾ ಕಾರ್ಯಕ್ರಮದ ಹೈಲೈಟ್ಸ್
Money Transfer
LATEST NEWS
- ಕೋಟೆ ಮಾರಿಕಾಂಬ ಜಾತ್ರೆ, ದರ್ಶನ ಮುಗಿಸಿ ಹೊರಬಂದ ವೃದ್ಧೆಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ

- ಶಿವಮೊಗ್ಗದ JNN ಕಾಲೇಜು ವಿದ್ಯಾರ್ಥಿಗಳು ಚಾಂಪಿಯನ್ಸ್, ಯಾವ್ಯಾವ ಸ್ಪರ್ಧೆಗಳಲ್ಲಿ ಯಾರೆಲ್ಲ ಗೆದ್ದಿದ್ದಾರೆ?

- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

About The Editor
ನಿತಿನ್ ಆರ್.ಕೈದೊಟ್ಲು






