ಶಿವಮೊಗ್ಗದಲ್ಲಿ ಅನುಮಾನಾಸ್ಪದವಾಗಿ ಯುವಕ ಸಾವು, ತೋಟದ ಬಳಿ ಪತ್ತೆಯಾಯ್ತು ಮೃತದೇಹ

Published On : ಏಪ್ರಿಲ್ 9, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ನಗರದ ತುಂಗಾನಗರ ಸಮೀಪದ ಕಾಮತ್ ಲೇಔಟ್‌ನಲ್ಲಿ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ (mysterious death) ಘಟನೆ ಬೆಳಕಿಗೆ ಬಂದಿದೆ.

​ಮೇಲಿನ ತುಂಗಾನಗರದ ನಿವಾಸಿ ಮಂಜುನಾಥ್ (24) ಮೃತ ವ್ಯಕ್ತಿ. ಅಡಿಕೆ ಆರಿಸುವುದು, ಗಾರೆ ಕೆಲಸ ಹಾಗೂ ಶಿಲ್ಪಿಯಾಗಿ ಕೆಲಸ ಮಾಡುತ್ತಿದ್ದರು. ಬುಧವಾರ ಬೆಳಗ್ಗೆ ಸ್ನೇಹಿತರ ಜೊತೆಗೆ ಮನೆಯಿಂದ ಹೊರಹೋಗಿದ್ದ ಮಂಜುನಾಥ್, ಗುರುವಾರ ಬೆಳಗ್ಗೆ ತೋಟವೊಂದರ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಸೋಕೋ ತಂಡ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Incident-at-a-layout-in-Tunga-Nagara-Police-station-limits.

ಇದನ್ನೂ ಓದಿ : ಇಂಟರ್‌ಸಿಟಿ ರೈಲಿನಲ್ಲಿ ಶಿವಮೊಗ್ಗಕ್ಕೆ ಬಂದ ಮಹಿಳೆ, ಮನೆ ತಲುಪಿದ ಮೇಲೆ ಕಾದಿತ್ತು ಆಘಾತ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 9, 2026

Leave a Comment