ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 21 JULY 2024
SHIMOGA : ಬಗರ್ ಹುಕುಂ ಸಾಗುವಳಿದಾರರ ಸಭೆ ಮುಗಿಸಿ ಪತಿಯೊಂದಿಗೆ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದ ಮಹಿಳೆಯೊಬ್ಬರ ನೆಕ್ಲೇಸ್ (NECKLACE) ಕಳ್ಳತನವಾಗಿದೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ.
ಸೊರಬ ತಾಲೂಕು ಮಳವಳ್ಳಿಯ ಹರೂರು ಗ್ರಾಮದ ನೇತ್ರಾವತಿ ಪತಿಯೊಂದಿಗೆ ಶಿವಮೊಗ್ಗದ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಗೆ ಬಂದಿದ್ದರು. ಸಭೆ ಮುಗಿಸಿ ಕೆಎಸ್‍ಆರ್‌ಟಿಸಿ ನಿಲ್ದಾಣದಲ್ಲಿ ಸೊರಬಕ್ಕೆ ತೆರಳುವ ಬಸ್ ಹತ್ತಿದ್ದರು. ಸೀಟು ಹಿಡಿದು ಕುಳಿತಿದ್ದ ತಮ್ಮ ವ್ಯಾನಿಟಿ ಬ್ಯಾಗ್ ಜಿಪ್ ಅರ್ಧ ತೆರೆದುಕೊಂಡಿದ್ದನ್ನು ಗಮನಿಸಿದರು. ಒಳಗೆ ಪರಿಶೀಲಿಸಿದಾಗ ನೆಕ್ಲೇಸ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

75 ಸಾವಿರ ರೂ. ಮೌಲ್ಯದ 17 ಗ್ರಾಂ ತೂಕದ ನೆಕ್ಲೇಸ್ ಕಳುವಾಗಿದೆ. ಬಸ್ ಹತ್ತುವಾರ ರಶ್ ಇತ್ತು. ಈ ವೇಳೆ ಕಳ್ಳರು ವ್ಯಾನಿಟಿ ಬ್ಯಾಗ್‌ನಿಂದ ನೆಕ್ಲೇಸ್ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಇದನ್ನೂ ಓದಿ ⇓
ಶಿವಮೊಗ್ಗ ಜಿಲ್ಲೆ, ಶೇ.50ರಷ್ಟು ಕಡಿಮೆಯಾದ ಮಳೆ, ಹವಾಮಾನ ಇಲಾಖೆಯಿಂದ ಮತ್ತೊಂದು ಮುನ್ಸೂಚನೆ, ಏನಿದೆ?
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು





