ಶಿವಮೊಗ್ಗದಲ್ಲಿ ಸ್ವೀಟ್‌ ಬಾಕ್ಸ್‌ ತೆಗೆದ ಜೈಲು ಸಿಬ್ಬಂದಿಗೆ ಶಾಕ್‌, ಯುವಕ ಜೈಲುಪಾಲು, ಏನಿದು ಕೇಸ್‌?

ಶಿವಮೊಗ್ಗ: ಖೈದಿಯೊಬ್ಬನಿಗೆ ತಲುಪಿಸಲು ಸ್ವೀಟ್‌ ಬಾಕ್ಸ್‌ನಲ್ಲಿ (Sweet Box) ಗಾಂಜಾ ತಂದಿದ್ದ ಯುವಕನೊಬ್ಬ ಜೈಲುಪಾಲಾಗಿದ್ದಾನೆ. ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ವೇಳೆ ಯುವಕ ಸಿಕ್ಕಿಬಿದ್ದಿದ್ದು ಆತನ ವಿರುದ್ಧ ಪ್ರಕರಣ ದಾಖಲಾಗಿದೆ. (ಈ ಸುದ್ದಿಯನ್ನು ಇನ್ನು 41 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗದ ಸೋಮಿನಕೊಪ್ಪದ ಸೈಯದ್‌ ವಾಸೀಂ (25) ಬಂಧಿತ. ಬೇಕರಿಯಿಂದ ತಂದಿದ್ದ ಸ್ವೀಟ್‌ ಬಾಕ್ಸ್‌ನಲ್ಲಿ ಗಾಂಜಾ ಅಡಗಿಸಿಟ್ಟುಕೊಂಡು ತಂದಿದ್ದ.

ಏನಿದು ಪ್ರಕರಣ?

ಕೇಂದ್ರ ಕಾರಾಗೃಹದ ಖೈದಿ ಮೆಹಬೂಬ್‌ ಖಾನ್‌ ಎಂಬಾತನನ್ನು ಮಾತನಾಡಿಸಲು ಸೈಯದ್‌ ವಾಸೀಂ ಎಂಬಾತ ಆಗಮಿಸಿದ್ದ. ಖೈದಿ ಮೆಹಬೂಬ್‌ ಖಾನ್‌ಗೆ ನೀಡಲು ಸ್ವೀಟ್‌ ಬಾಕ್ಸ್‌ ತಂದಿದ್ದ. ಜೈಲು ಪ್ರವೇಶ ದ್ವಾರದಲ್ಲಿ KSISF ಭದ್ರತಾ ಸಿಬ್ಬಂದಿ ಸ್ವೀಟ್‌‌ ಬಾಕ್ಸ್‌ ತಪಾಸಣೆ ನಡೆಸಿದರು. ಅದರಲ್ಲಿ ಗಾಂಜಾ ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ. KSISF ಸಿಬ್ಬಂದಿ ಸೈಯದ್‌ ವಾಸೀಂನನ್ನು ವಶಕ್ಕೆ ಪಡೆದಿದ್ದಾರೆ.

Shimoga-Central-Jail-Building

ಘಟನೆ ಸಂಬಂಧ ಜೈಲು ಮುಖ್ಯ ಅಧೀಕ್ಷಕಿ ಪ್ರೀತಿ ದೂರು ನೀಡಿದ್ದು, ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ » ಭದ್ರಾವತಿ ಡಿವೈಎಸ್‌ಪಿಯಾಗಿ ದಕ್ಷತಾ ಪದಕ ವಿಜೇತ ಪೊಲೀಸ್‌ ಅಧಿಕಾರಿ

Sweet Box

Shimoga-Central-Jail-Prison

Leave a Comment