ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 13 ಡಿಸೆಂಬರ್ 2019
ಬ್ಯಾಂಕ್ ಮ್ಯಾನೇಜರ್ ಎಂದು ಕರೆ ಮಾಡಿ, ಅಕೌಂಟ್ ನಂಬರ್ ಪಡೆದು ಅಣ್ಣ, ತಮ್ಮ ಇಬ್ಬರಿಗೂ ಪಂಗನಾಮ ಹಾಕಿರುವ ಘಟನೆ ಸಾಗರದಲ್ಲಿ ನಡೆದಿದೆ. ಒಬ್ಬರ ಖಾತೆಯಿಂದ 87 ಸಾವಿರ, ಮತ್ತೊಬ್ಬರ ಖಾತೆಯಿಂದ 8 ಸಾವಿರ ರೂ. ಹಣವನ್ನು ಖದೀಮರು ಲಪಟಾಯಿಸಿದ್ದಾರೆ.
ಸಾಗರದ ಕೆಳದಿಯ ಹೆಚ್.ಆರ್.ಮಂಜಪ್ಪ ಎಂಬುವವರಿಗೆ ಕರೆ ಮಾಡಿದ ಕಿಡಿಗೇಡಿಯೊಬ್ಬ, ತನ್ನನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ಅವರ ಖಾತೆಯ ವಿವರ, ಎಟಿಎಂ ನಂಬರ್, ಪಿನ್ ಸಂಖ್ಯೆ ಪಡೆದುಕೊಂಡು 87 ಸಾವಿರ ರೂ. ಹಣವನ್ನು ಬ್ಯಾಂಕ್ ಖಾತೆಯಿಂದ ದೋಚಿದ್ದಾನೆ.
ತಮ್ಮನಿಗೂ ಕರೆ ಮಾಡಿದ ವಂಚಕ
ಮಂಜಪ್ಪ ಅವರ ತಮ್ಮನಿಗೂ ವಂಚಕ ಕರೆ ಮಾಡಿದ್ದಾನೆ. ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು ಮಂಜಪ್ಪ ಅವರ ಸಹೋದರ ಮಹಾಬಲೇಶ್ವರ ಅವರ ಅಕೌಂಟ್’ನಿಂದ 8,853 ರೂ. ಹಣವನ್ನು ದೋಚಿದ್ದಾನೆ.
ಹಣ ಕಳೆದುಕೊಂಡ ಸಹೋದರರು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಲಂ 419, 420 ಐಪಿಸಿ ಮತ್ತು 66(ಸಿ) 66(ಡಿ) ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Brothers from Sagara taluk has lost the money for online frauds. A hoax call pretending as the Manager of SBI bank. Case has been registered in Shimoga CEN Police Station.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422