ಶಿವಮೊಗ್ಗ ಲೈವ್.ಕಾಂ | SHIMOGA NEWS | 7 JUNE 2021
ಜಿಯೋ ಕಂಪನಿ ಮ್ಯಾನೇಜರ್ ಎಂದು ಫೋನ್ ಮಾಡಿ ಹೊಸಮನೆ ಬಡಾವಣೆಯ ಮಹಿಳೆಯೊಬ್ಬರಿಗೆ 77 ಸಾವಿರ ರೂ. ವಂಚನೆ ಮಾಡಿರುವ ಪ್ರಕರಣ ವರದಿಯಾಗಿದೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬಹುಮಾನದ ಆಸೆ ಹುಟ್ಟಿಸಿದ ವಂಚಕರು
ಮಹಿಳೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ ತನ್ನನ್ನು ಜಿಯೋ ಕಂಪನಿ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. 25 ಲಕ್ಷ ರೂ. ಬಹುಮಾನ ಬಂದಿದೆ ಎಂದು ತಿಳಿಸಿದ್ದಾನೆ.
ಬಹುಮಾನದ ಹಣವನ್ನು ನಿಮ್ಮ ಖಾತೆಗೆ ವರ್ಗಾಯಸಿವ ಸಂಬಂಧ ಮತ್ತೊಬ್ಬ ಮ್ಯಾನೇಜರ್ ರಾಣಾ ಪ್ರತಾಪ್ ಸಿಂಗ್ ಎಂಬುವವರು ಕರೆ ಮಾಡಿ ಮಾಹಿತಿ ನೀಡುತ್ತಾರೆ ಎಂದು ಹೇಳಿದ್ದಾನೆ. ಕೆಲವೆ ಹೊತ್ತಿನಲ್ಲಿ ಜಿಯೋ ಕಂಪನಿ ಕಂಪನಿ ಮ್ಯಾನೇಜರ್ ಸೋಗಿನಲ್ಲಿ ಮತ್ತೊಂದು ನಂಬರ್‍ನಿಂದ ಕರೆ ಮಾಡಿದ್ದಾನೆ.
ಹೊಸಮನೆ ಬಡಾವಣೆಯ ಮಹಿಳೆಗೆ ಕರೆ ಮಾಡಿ, ಬಹುಮಾನದ ಹಣ ವರ್ಗಾಯಿಸಲು ಕೆಲವು ಚಾರ್ಜ್ ಕಟ್ಟಬೇಕು ಎಂದು ತಿಳಿಸಿದ್ದಾನೆ. ಹಂತ ಹಂತವಾಗಿ 77,100 ರೂ. ಹಣವನ್ನು ಮಹಿಳೆಯಿಂದ ಫೋನ್ ಪೇ ಮೂಲಕ ಪಡೆದುಕೊಂಡಿದ್ದಾನೆ.
ತಾನು ಮೋಸ ಹೋಗಿರುವುದು ಅರಿವಾಗುತ್ತಿದ್ದಂತೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಲಾಟರಿ ನೆಪದಲ್ಲಿ ಮಹಾ ವಂಚನೆ
ನಯ ವಂಚಕರು ಕರೆ ಮಾಡಿ ಲಾಟರಿ ನೆಪದಲ್ಲಿ ಹಲವರನ್ನು ವಂಚಿಸುತ್ತಿದ್ದಾರೆ. ಪ್ರತಿಷ್ಠಿತ ಕಂಪನಿಗಳು, ಪ್ರಸಿದ್ಧ ಕಾರ್ಯಕ್ರಮಗಳ ಹೆಸರಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ಲಕ್ಷ ಲಕ್ಷ ಬಹುಮಾನದ ಆಸೆ ಹುಟ್ಟಿಸಿ, ಚಾರ್ಜ್‍ಗಳನ್ನು ಕಟ್ಟಬೇಕು ಎಂದು ಮನವಿ ಮಾಡುತ್ತಾರೆ. ಹಣದಾಸೆಗೆ ಮರಳುದಾರೆ ಬ್ಯಾಂಕ್ ಖಾತೆಯಲ್ಲಿ ಕೂಡಿಟ್ಟ ಹಣವನ್ನು ವಂಚಕರು ಲಪಟಾಯಿಸುತ್ತಾರೆ. ಈ ಬಗ್ಗೆ ಸರ್ವಾಜನಿಕರು ಎಚ್ಚರ ವಹಿಸಬೇಕಿದೆ.
ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ ಏರಿಯಾದಿಂದ ಕರೆ ಮಾಡಿ. ಪರೀಕ್ಷೆಗೆ ನಿಮ್ಮ ಮನೆಗೆ ಬರ್ತಾರೆ ತಜ್ಞರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]