ಗ್ಯಾಸ್‌ ಏಜೆನ್ಸಿ ಶುರು ಮಾಡುವುದು ಹೇಗೆ? ಗೂಗಲ್‌ನಲ್ಲಿ ಹುಡುಕಿದ ನಿವೃತ್ತ ಉದ್ಯೋಗಿಗೆ ಕೊನೆಗೆ ಕಾದಿತ್ತು ಶಾಕ್

SHIVAMOGGA LIVE | 5 JULY 2023

SHIMOGA : ಗ್ಯಾಸ್‌ ಎಜೆನ್ಸಿ (Gas Agency) ಆರಂಭಿಸಲು ಡೀಲರ್‌ ಶಿಪ್‌ ಶುಲ್ಕ, ಅಗ್ರಿಮೆಂಟ್‌ ಶುಲ್ಕ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 88,500 ರೂ. ವಂಚಿಸಲಾಗಿದೆ. ಹಣ ವರ್ಗಾಯಿಸಿ ವಂಚನೆಗೊಳಗಾಗಿರುವ ನಿವೃತ್ತ ಉದ್ಯೋಗಿಯೊಬ್ಬರು ಈಗ ಶಿವಮೊಗ್ಗ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

Gas-Cylinder-Agecny-Fraud-in-Shikaripura

ಏನಿದು ಪ್ರಕರಣ?

ನಿವೃತ್ತ ಉದ್ಯೋಗಿ, ಶಿಕಾರಿಪುರ ತಾಲೂಕು ನಿವಾಸಿಯೊಬ್ಬರು (ಹೆಸರು ಗೌಪ್ಯ) ಗ್ಯಾಸ್‌ ಏಜೆನ್ಸಿ ಆರಂಭಿಸುವ ಸಂಬಂಧ ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದರು. ಆ ಬಳಿಕ ವಿವಿಧ ಮೊಬೈಲ್‌ ನಂಬರ್‌ಗಳಿಂದ ಅವರಿಗೆ ಕೆಲವರು ಕರೆ ಮಾಡಿದ್ದರು. ‘ತಾವು ಇಂಡೇನ್‌ ಗ್ಯಾಸ್‌ ಕಂಪನಿಯ ಮುಂಬೈ ಕಚೇರಿಯಿಂದ ಮಾತನಾಡುತ್ತಿರುವುದಾಗಿ’ ನಂಬಿಸಿದ್ದರು. ‘ಗ್ಯಾಸ್‌ ಏಜೆನ್ಸಿ (Gas Agency) ಆರಂಭಿಸಲು ಗೋಡನ್‌ ನಿರ್ಮಿಸಬೇಕು. ಅದರ ಖರ್ಚು, ವೆಚ್ಚವನ್ನು ಕಂಪನಿಯೇ ನೀಡಲಿದೆ’ ಎಂದು ಭರವಸೆ ನೀಡಿದ್ದರು. ‘ಪ್ರತಿ ಸಿಲಿಂಡರ್‌ಗೆ 150 ರೂ. ಲಾಭ ಬರಲಿದೆ’ ಎಂದು ಆಸೆ ಹುಟ್ಟಿಸಿದ್ದರು.‌

Nanjappa Hospital Advertisement

ಇದನ್ನೂ ಓದಿ – ಮಧ್ಯರಾತ್ರಿ ಶಿವಮೊಗ್ಗ KSRTC ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕನಿಗೆ ಶಾಕ್‌, ಕಂತೆ ಕಂತೆ ಹಣದ ಬ್ಯಾಗ್‌ ಮಿಸ್ಸಿಂಗ್

ಇದನ್ನು ನಂಬಿದ ಶಿಕಾರಿಪುರದ ನಿವಾಸಿ, ಗ್ಯಾಸ್‌ ಏಜೆನ್ಸಿ ಆರಂಭಕ್ಕೆ ಒಪ್ಪಂದಕ್ಕೆ ಸಿದ್ಧತೆ ಮಾಡಿಕೊಂಡರು. ಮುಂಬೈನಿಂದ ಫೋನ್‌ ಮಾಡಿದ್ದ ವ್ಯಕ್ತಿಗಳು ಅಪ್ಲಿಕೇಷನ್‌ ಶುಲ್ಕ, ಡೀಲರ್‌ ಶುಲ್ಕ, ಅಗ್ರಿಮೆಂಟ್‌ ಶುಲ್ಕ ಸೇರಿದಂತೆ ವಿವಿಧ ಶುಲ್ಕಗಳ ನೆಪದಲ್ಲಿ 88,500 ರೂ.ಗಳನ್ನು ಅವರ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಮೋಸ ಹೋಗಿರುವುದು ಗೊತ್ತಾದ ಮೇಲೆ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment