ಡ್ರೆಸ್ಸಿಂಗ್‌ ಟೇಬಲ್‌ ವಿಡಿಯೋ ತಂದ ಫಜೀತಿ, ಮಹಿಳೆಗೆ ₹1.70 ಲಕ್ಷ ವಂಚನೆ, ಆಗಿದ್ದೇನು?

ಶಿವಮೊಗ್ಗ: ಯೂಟ್ಯೂಬ್‌ನಲ್ಲಿ ಫರ್ನಿಚರ್ ಶೋರೂಮ್ ಜಾಹೀರಾತು ವೀಕ್ಷಿಸಿ ಡ್ರೆಸ್ಸಿಂಗ್ ಟೇಬಲ್ ಬುಕ್ ಮಾಡಿದ ಮಹಿಳೆಯೊಬ್ಬರು ₹1,70,000 ಹಣ ಕಳೆದುಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಮಹಿಳೆಯೊಬ್ಬರು ಆಗಸ್ಟ್ 22 ರಂದು ಮೊಬೈಲ್‌ನಲ್ಲಿ ಪೀಠೋಪಕರಣಗಳ ಯುಟ್ಯೂಬ್ ವೀಡಿಯೊಗಳನ್ನು ವೀಕ್ಷಿಸುತ್ತಿದ್ದರು. ಈ ವೇಳೆ ವಾಟ್ಸಾಪ್ ಮೂಲಕ ಬುಕಿಂಗ್ ಮಾಡುವಂತೆ ನಂಬರ್ ನೀಡಲಾಗಿತ್ತು. ಇದನ್ನು ನಂಬಿ ಮಹಿಳೆ ಡ್ರೆಸ್ಸಿಂಗ್ ಟೇಬಲ್ ಸ್ಕ್ರೀನ್‌ಶಾಟ್ ಕಳುಹಿಸಿ ಬೆಲೆ ವಿಚಾರಿಸಿದರು. ₹3,500 ಎಂದು ತಿಳಿಸಿ ಶೇ.50ರಷ್ಟು ಮುಂಗಡ ಹಣ ಹಾಕುವಂತೆ ಸ್ಕ್ಯಾನರ್ ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ.  

SMS-Fraud-Shimoga-CEN-Police-Station.

ನಂತರ ಆರ್ಡರ್ ಬುಕ್ ಆಗಲು ಪೂರ್ಣ ಹಣ ಹಾಕಬೇಕೆಂದು ತಿಳಿಸಲಾಗಿತ್ತು. ಆ ಬಳಿಕ ನಾನಾ ಕಾರಣಗಳನ್ನು ಹೇಳಿ ವಿವಿಧ ಹಂತಗಳಲ್ಲಿ ಹೆಚ್ಚುವರಿ ಹಣ ವರ್ಗಾಯಿಸಿಕೊಳ್ಳಲಾಗಿದೆ. ಅಲ್ಲದೆ ಹಣ ವಾಪಸ್ ನೀಡುವುದಾಗಿ ಮೆಸೇಜ್‌ಗಳನ್ನು ಕಳುಹಿಸಿ ಒಟ್ಟು ₹1,70,000 ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಸಂಬಂಧ ಸಿಇಎನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ