SHIVAMOGGA LIVE NEWS | 23 MAY 2023
HOSANAGARA : ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರ್ (Petrol Tanker) ಲಾರಿ ಪಲ್ಟಿಯಾಗಿದೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹೊಸನಗರ ತಾಲೂಕಿನ ನಗರದ ದರ್ಗಾ ಕ್ರಾಸ್ ಬಳಿ ಘಟನೆ ಸಂಭವಿಸಿತ್ತು. ಮಂಗಳೂರಿನಿಂದ ಪೆಟ್ರೋಲ್ ತುಂಬಿಕೊಂಡು ಶಿವಮೊಗ್ಗಕ್ಕೆ ತೆರಳುತ್ತಿದ್ದ ಟ್ಯಾಂಕರ್ (Petrol Tanker) ಲಾರಿ ಅಪಘಾತಕ್ಕೀಡಾಗಿತ್ತು. ರಸ್ತೆ ಪಕ್ಕದಲ್ಲಿ ಟ್ಯಾಂಕರ್ ಪಲ್ಟಿಯಾಗಿತ್ತು. ಇದರಿಂದ ಪೆಟ್ರೋಲ್ ಸೋರಿಕೆಯಾಗುತ್ತಿತ್ತು.
ಇದನ್ನೂ ಓದಿ – ಫಟಾಫಟ್ ನ್ಯೂಸ್ 8 AM – ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಟಾಪ್ 10 ನ್ಯೂಸ್
ವಿಚಾರ ತಿಳಿದ ನಗರ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಯಾವುದೆ ಅವಘಡ ಸಂಭವಿಸದಂತೆ ನೋಡಿಕೊಂಡರು. ಜನರು ಟ್ಯಾಂಕರ್ ಲಾರಿ ಸಮೀಪ ಬಾರದಂತೆ ತಡೆದರು. ಘಟನೆಯಿಂದಾಗಿ ಹೊಸನಗರ – ನಗರ ನಡುವೆ ಕೆಲ ಹೊತ್ತು ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಚಾಲಕ ಸಾಗರದ ಮಧುಸೂದನ್ ಕೈಗೆ ಗಾಯವಾಗಿದೆ. ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200