ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ : ದೇವಸ್ಥಾನವೊಂದರ (Temple) ಬಾಗಿಲಿನ ಬೀಗ ಮುರಿದ ಕಳ್ಳರು ದೇವರ ಮೂರ್ತಿಗಳನ್ನೇ ಕದ್ದೊಯ್ದಿದ್ದಾರೆ. ಶಿವಮೊಗ್ಗ ನಗರದ ಆನಂದರಾವ್ ಬಡಾವಣೆಯ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಕಳ್ಳತನವಾಗಿದೆ.
ಇದನ್ನೂ ಓದಿ » ಕಾಡು ಹಂದಿ ಬೇಟೆಯಾಡಿ ಮಾಂಸ ಹಂಚಿಕೊಳ್ಳುವಾಗ ಅರಣ್ಯಾಧಿಕಾರಿಗಳು ದಾಳಿ
ಬೆಳಗ್ಗೆ ಪೂಜೆಗೆಂದು ಅರ್ಚಕರು ದೇವಸ್ಥಾನಕ್ಕೆ ಬಂದಾಗ ಬಾಗಿಲಿಗೆ ಹಾಕಿದ್ದ ಬೀಗ ಮುರಿಯಲಾಗಿತ್ತು. ಒಳಗೆ ಹೋಗಿ ಪರಿಶೀಲಿಸಿದಾಗ ಹುಂಡಿ ಒಡೆದು ಸುಮಾರು 8 ಸಾವಿರ ರೂ. ಕಳ್ಳತನ ಮಾಡಲಾಗಿತ್ತು. ಇನ್ನು, ಒಳಗಿದ್ದ ಚೌಡೇಶ್ವರಿ ಮತ್ತು ಗಣಪತಿ ದೇವರ ಹಿತ್ತಾಳೆ ವಿಗ್ರಹಗಳು ಸೇರಿದಂತೆ ಒಟ್ಟು 40 ಸಾವಿರ ರೂ. ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

LATEST NEWS
- ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ

- ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

- ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

- ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲು, ತಾಪಮಾನ ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ಉಷ್ಣಾಂಶ?

- ತುಂಗಾ ಚಾನಲ್ ಬಳಿ ಸ್ಕೂಟಿ ನಿಲ್ಲಿಸಿಕೊಂಡಿದ್ದವರ ಮೇಲೆ ಪೊಲೀಸ್ ದಾಳಿ, ಒಬ್ಬ ಎಸ್ಕೇಪ್, ಮತ್ತೊಬ್ಬ ಅರೆಸ್ಟ್

About The Editor
ನಿತಿನ್ ಆರ್.ಕೈದೊಟ್ಲು





