ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ: ಮನೆಗಳ ಫೋಟೊ ಕ್ಲಿಕ್ ಮಾಡಿ ರಿವ್ಯು (review) ನೀಡಿದರೆ ಲಾಭಾಂಶ ನೀಡುವುದಾಗಿ ನಂಬಿಸಿ ಶಿವಮೊಗ್ಗದ ಎಲೆಕ್ಟ್ರೀಷಿಯನ್ ಒಬ್ಬರಿಗೆ 12.72 ಲಕ್ಷ ರೂ. ಹಣ ವಂಚಿಸಲಾಗಿದೆ.
ಪಾರ್ಟ್ ಟೈಮ್ ಉದ್ಯೋಗ ಕುರಿತು ಎಲೆಕ್ಟ್ರೀಷಿನ್‌ಗೆ ವಾಟ್ಸಪ್‌ಗೆ ಮೆಸೇಜ್ ಬಂದಿತ್ತು. ಅದನ್ನು ಕ್ಲಿಕ್ ಮಾಡಿದಾಗ ಮನೆಗಳಿಗೆ ರಿವ್ಯು ನೀಡಿದರೆ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು. ಅಂತೆಯೇ ಮೊದಲು 25 ಮನೆಗಳ ಫೋಟೊಗಳ ಮೇಲೆ ಕ್ಲಿಕ್ ಮಾಡಿ ರಿವ್ಯು ಬರೆಯುತ್ತಿದ್ದಂತೆ ಎಲೆಕ್ಟ್ರೀಷಿಯನ್ ಬ್ಯಾಂಕ್ ಖಾತೆಗೆ 800 ರೂ. ಹಣ ವರ್ಗಾಯಿಸಿದ್ದರು.

ಹೆಚ್ಚಿನ ಹಣ ಹೂಡಿಕೆ ಮಾಡಿ ಹೆಚ್ಚು ರಿವ್ಯು ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ಎಲೆಕ್ಟ್ರೀಷಿಯನ್‌ಗೆ ನಂಬಿಸಿದ ವಂಚಕರು, ಹಂತ ಹಂತವಾಗಿ 12.72 ಲಕ್ಷ ರೂ. ಹೂಡಿಕೆ ಮಾಡಿಕೊಂಡಿದ್ದರು. ಬಳಿಕ ಕಮಿಷನ್ ಹಣವನ್ನೂ ನೀಡದೆ, ಹೂಡಿಕೆ ಮಾಡಿದ್ದ ಹಣವನ್ನು ಹಿಂತಿರುಗಿಸದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.







