ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಸೋಮಿನಕೊಪ್ಪದಲ್ಲಿ ಗೋಹತ್ಯೆ ನಡೆಸಿ ಮಾಂಸ ಮಾರಾಟ ಮಾಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ವಿನೋಬನಗರ ಠಾಣೆಯ ಪಿಎಸ್ಐ ತಿರುಮಲೇಶ್.ಜಿ. ನೇತೃತ್ವದಲ್ಲಿ ಕಾರ್ಯಾಚರಣೆ (police) ನಡೆದಿದೆ.
ಸೋಮಿನಕೊಪ್ಪದ ಮಸೀದಿ ರೆಸ್ತೆಯ ಮನೆಯ ಹಿಂಭಾಗದ ಶೆಡ್ನಲ್ಲಿ ಹಸುಗಳನ್ನು ಹತ್ಯೆ ಮಾಡಿ ಸಾರ್ವಜನಿಕರಿಗೆ ಮಾಂಸ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಸ್ಥಳದಲ್ಲಿ ಹಸುಗಳ ದೇಹದ ಭಾಗಗಳನ್ನು ಕಬ್ಬಿಣದ ರಾಡುಗಳಿಗೆ ನೇತು ಹಾಕಲಾಗಿತ್ತು. ಪೊಲೀಸರು ಸ್ಥಳದಲ್ಲಿದ್ದ ಆರೋಪಿ ರಾಜಿಕ್ ಪಾಷಾ (25) ಎಂಬಾತನನ್ನು ಬಂಧಿಸಿದ್ದಾರೆ.

ದಾಳಿ ವೇಳೆ ಪೊಲೀಸರು ಸುಮಾರು 122 ಕೆಜಿ ಹಸುವಿನ ಮಾಂಸ, 3 ಹಸುಗಳ ತಲೆಗಳು, 12 ಕಾಲುಗಳು, 7 ಶ್ವಾಸಕೋಶಗಳು, 7 ಚರ್ಮಗಳು, 7 ಲಿವರ್ ಮತ್ತು ಸ್ಪ್ಲೀನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ಮಚ್ಚು, ಮೂರು ವಿವಿಧ ಅಳತೆಯ ಚಾಕುಗಳು, ಎಲೆಕ್ಟ್ರಾನಿಕ್ ತೂಕದ ತಕ್ಕಡಿ, ನೇತು ಹಾಕುವ ತೂಕದ ಯಂತ್ರ, ಮರದ ತುಂಡು ಹಾಗೂ 1.840 ಕೆಜಿ ತೂಕದ ಪ್ಲಾಸ್ಟಿಕ್ ಕವರ್ಗಳನ್ನು ಜಪ್ತಿ ಮಾಡಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಸರ್ಕಾರಿ ಕೆಲಸ ಕೊಡಿಸುವುದಾಗಿ ಲಕ್ಷ ಲಕ್ಷ ಪಡೆದ ದಂಪತಿ, ಆಗಿದ್ದೇನು?

LATEST NEWS
- ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್

- ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್ ಲಾರಿ, ಇಲ್ಲಿದೆ ಡಿಟೇಲ್ಸ್

- ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

- ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್ ವಾಪಸ್

- ಸರ್ಕಾರಿ ಕೆಲಸ ಕೊಡಿಸುವುದಾಗಿ ಲಕ್ಷ ಲಕ್ಷ ಪಡೆದ ದಂಪತಿ, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





