ಶಿವಮೊಗ್ಗದಲ್ಲಿ ಲಾಡ್ಜ್‌ ಮೇಲೆ ಪೊಲೀಸ್‌ ರೇಡ್‌, 11 ಮಂದಿ ವಿರುದ್ಧ ಕೇಸ್‌

SHIVAMOGGA LIVE NEWS | 17 DECEMBER 2024

ಶಿವಮೊಗ್ಗ : ಲಾಡ್ಜ್‌ (Lodge) ಒಂದರ ಮೇಲೆ ಪೊಲೀಸರು ದಾಳಿ ನಡೆಸಿ ಕೊಠಡಿಯಲ್ಲಿ ಅಂದರ್‌ ಬಾಹರ್‌ ಆಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗದ ಬೈಪಾಸ್‌ ರಸ್ತೆಯಲ್ಲಿರುವ ಲಾಡ್ಜ್‌ ಒಂದರ ಮೇಲೆ ದಾಳಿ ನಡೆಸಲಾಗಿದೆ.

ಕೊಠಡಿ ಸಂಖ್ಯೆ 303ರಲ್ಲಿ ಸುಮಾರು ಹತ್ತರಿಂದ ಹನ್ನೊಂದು ಮಂದಿ ಅಂದರ್‌ ಬಾಹರ್‌ ಜೂಜಾಟ ಆಡುತ್ತಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ದೊಡ್ಡಪೇಟೆ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಆರೋಪಿಗಳ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Decathlon

ಇದನ್ನೂ ಓದಿ » ಹೊಳಲೂರು ಬಳಿ ಕರಡಿ ಪ್ರತ್ಯಕ್ಷ, ವಿಡಿಯೋ ವೈರಲ್‌, ಜನರಲ್ಲಿ ಭೀತಿ

Doddapete-Police-raid-on-Lodge-in-Shimoga.

Leave a Comment