SHIVAMOGGA LIVE | 10 JULY 2023
ಭದ್ರಾವತಿಯಲ್ಲಿ ಪೊಲೀಸರ ಪಥ ಸಂಚಲನ
BHADRAVATHI : ನ್ಯೂ ಟೌನ್ ಪೊಲೀಸ್ ಠಾಣೆ ಸಿಬ್ಬಂದಿಗಳು ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ (Route March) ನಡೆಸಿದರು. ಭದ್ರಾವತಿಯ ಜಿಂಕ್ ಲೈನ್ನ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಲಾಯಿತು. ಠಾಣೆಯ ಉಪ ನಿರೀಕ್ಷಕ ರಮೇಶ್ ನೇತೃತ್ವದಲ್ಲಿ ಪಂಥ ಸಂಚಲನ ನಡೆಯಿತು. ಪಿಎಸ್ಐ ಭಾರತಿ, ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸ್ ದಾಳಿ
SHIMOGA : ವಿನೋಬನಗರದ ಆರ್ಎಂಸಿಯ ಉಗ್ರಾಣ ನಿಗಮದ ಮುಂದೆ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಜೂಜಾಟಕ್ಕೆ ತೊಡಗಿಸಿದ್ದ 11,320 ರೂ. ನಗದು ವಶಕ್ಕೆ ಪಡೆಯಲಾಗಿದೆ. ವಿನೋಬನಗರ ಪಿಎಸ್ಐ ಸುನಿಲ್.ಬಿ.ಸಿ. ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹಲ್ಲೆಗೆ ಮುಂದಾದವನ ಕೈ, ಕಾಲು ಕಟ್ಟಿದರು
BHADRAVATHI : ಹಲ್ಲೆ ಮಾಡಲು ಬಂದಿದ್ದ ಆರೋಪದ ಮೇಲೆ ಯುವಕನೊಬ್ಬನ ಕೈ, ಕಾಲು ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಲಾಗಿದೆ. ಭದ್ರಾವತಿಯ ಶಿವಾಜಿ ಸರ್ಕಲ್ನಲ್ಲಿ ಘಟನೆ ಸಂಭವಿಸಿದೆ. ಜು.8ರಂದು ವ್ಯಕ್ತಿಯೊಬ್ಬರ ಮೇಲೆ ಯುವಕನೊಬ್ಬ ಹಲ್ಲೆ ಮಾಡಲು ಬಂದಿದ್ದ ಎಂದು ಆರೋಪಿಸಲಾಗಿದೆ. ಯುವಕನನ್ನು ಹಿಡಿದು ಕೈ, ಕಾಲು ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಲಾಗಿದೆ. ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಬೈಕ್ ಕಳ್ಳತನ
SHIMOGA : ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ನಿಲ್ಲಿಸಿದ್ದ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿದೆ. ಗದಗದ ಮಂಜುನಾಥ ಎಂಬುವವರಿಗೆ ಸೇರಿದ ಬೈಕ್ ನಾಪತ್ತೆಯಾಗಿದೆ. ಪ್ಲಾಸ್ಟಿಕ್ ವ್ಯಾಪಾರಿ ಮಂಜುನಾಥ ಬೈಕ್ ನಿಲ್ಲಿಸಿ ಪಕ್ಕದಲ್ಲಿದ್ದ ಶೌಚಾಲಯಕ್ಕೆ ಹೋಗಿದ್ದರು. ಮರಳಿ ಬರುವಷ್ಟರಲ್ಲಿ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಾಡಿದರು ಸಿಕ್ಕಿಲ್ಲ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಗೃಹಿಣಿಯರೆ ಹುಷಾರ್, ನಿಮಗೂ ಬರಬಹುದು ‘ವಿಕ್ಕಿ’ಯ ಮೆಸೇಜ್, ಸಂಕಷ್ಟಕ್ಕೆ ಸಿಲುಕಿದ ಶಿವಮೊಗ್ಗದ ಮಹಿಳೆ
ಅಸ್ವಸ್ಥ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತ, ವಾರಸುದಾರರ ಪತ್ತೆಗೆ ಪ್ರಕಟಣೆ
SHIMOGA : ತೀರ್ಥಹಳ್ಳಿ ರಸ್ತೆಯಲ್ಲಿ ಸುಮಾರು 55 – 60 ವರ್ಷದ ವ್ಯಕ್ತಿಯೊಬ್ಬರು ಅಸ್ವಸ್ಥಗೊಂಡಿದ್ದರು. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತರ ಗುರುತು ಸಿಗದ ಹಿನ್ನೆಲೆ ವಾರಸುದಾರರು ಯಾರಾದರು ಇದ್ದಲ್ಲಿ ತುಂಗಾ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. ವ್ಯಕ್ತಿಯು 5.5 ಅಡಿ ಎತ್ತರ, ತೆಳುವಾದ ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ, ಎದೆಯ ಮೇಲೆ ಸಾಸಿವೆ ಗಾತ್ರದ ಕಪ್ಪು ಬಣ್ಣದ ಮಚ್ಚೆ ಇರುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.