ಶಿವಮೊಗ್ಗದಲ್ಲಿ ವಿದ್ಯುತ್‌ ತಗುಲಿ ಪವರ್ ಮ್ಯಾನ್‌ ಸಾವು, ಹೇಗಾಯ್ತು ಘಟನೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ನಗರದ ಹರಿಗೆಯಲ್ಲಿ ವಿದ್ಯುತ್ ತಗುಲಿ ಪವರ್‌ಮ್ಯಾನ್ (Powerman / Lineman) ನಾಗರಾಜ್ (29) ಎಂಬುವವರು ಮೃತಪಟ್ಟಿದ್ದಾರೆ. ಹರಪನಹಳ್ಳಿ ಮೂಲದ ಇವರು ಎಂಆರ್‌ಎಸ್ ವಸತಿ ಗೃಹದಲ್ಲಿ (MRS quarters) ವಾಸವಾಗಿದ್ದರು.

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಭಾನುವಾರ ಸಂಜೆ ವಿದ್ಯುತ್ ಸಂಪರ್ಕ (Power supply) ಕಡಿತಗೊಂಡಿರುವ ಬಗ್ಗೆ ದೂರು (Complaint) ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿದ್ದು, ವಿದ್ಯುತ್ ಸಂಪರ್ಕ ಇಲ್ಲ ಎಂದು ತಿಳಿದು ಜಂಗಲ್ ಕಟಿಂಗ್ (Jungle cutting / Tree trimming) ಮಾಡುವಾಗ ವಿದ್ಯುತ್ ಸ್ಪರ್ಶಿಸಿ (Electrocuted) ಅವರು ಮೃತಪಟ್ಟಿದ್ದಾರೆ ಎಂದು ಮೆಸ್ಕಾಂ (MESCOM) ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಎರಡು ದಿನಗಳ ಅಂತರದಲ್ಲಿ ಇಬ್ಬರು ಪವರ್‌ಮ್ಯಾನ್‌ಗಳು ಮೃತಪಟ್ಟಿದ್ದಾರೆ.

Power-Man-death-in-Shimoga-MRS