SHIMOGA : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯ ಬ್ಯಾಗ್‌ನಲ್ಲಿದ್ದ ಪರ್ಸ್ ಕಳವು ಮಾಡಲಾಗಿದೆ. ಅದರಲ್ಲಿದ್ದ 1.51 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ದಾವಣಗೆರೆ ಪ್ಲಾಟ್‌ಫಾರಂನಲ್ಲಿ ಘಟನೆ ಸಂಭವಿಸಿದೆ. ನ್ಯೂ ಮಂಡ್ಲಿಯ ನೇತ್ರಮ್ಮ, ಜನ ದಟ್ಟಣೆ ಮಧ್ಯೆ ಹೊನ್ನಾಳಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದರು. ಸೀಟಿನಲ್ಲಿ ಕುಳಿತಿದ್ದಾಗ ಪಕ್ಕದಲ್ಲಿ ಕುಳಿತ ಮಹಿಳೆಯೊಬ್ಬರು ನೇತ್ರಮ್ಮ ಅವರ ತಾಳಿ ಸರ ತುಂಡಾಗಿದೆ ಎಂದು ತೋರಿಸಿದ್ದರು. ಕೂಡಲೆ ನೇತ್ರಮ್ಮ ತಾಳಿ ಸರ ಬಿಚ್ಚಿ ಪರ್ಸ್‌ಗೆ ಹಾಕಿ ಅದನ್ನು ಬ್ಯಾಗಿನಲ್ಲಿರಿಸಿದ್ದರು.
ಚೀಲೂರು ಬಳಿ ಕಾದಿತ್ತು ಆಘಾತ
ಬಸ್ಸು ಚೀಲೂರು ಬಳಿ ತೆರಳುತ್ತಿದ್ದಾಗ ನೇತ್ರಮ್ಮ ಬ್ಯಾಗ್ ತೆಗೆದು ನೋಡಿದಾಗ ಪರ್ಸ್ ಇರಲಿಲ್ಲ. ಎಲ್ಲೆಡೆ ಹುಡುಕಾಡಿ ಹೊನ್ನಾಳಿ ತಲುಪಿದ್ದಾರೆ. ತಮ್ಮ ಮಗಳ ಮನೆಗೆ ಹೋಗಿ ವಿಷಯ ತಿಳಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಂತರ ದೊಡ್ಡಪೇಟೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪರ್ಸ್‌ನಲ್ಲಿ 35 ಗ್ರಾಂ ತೂಕದ ಎರಡು ಬಂಗಾರದ ಸರ, ಮಕ್ಕಳ ಬೆಳ್ಳಿ ಖಡ್ಗ ಇತ್ತು. ಇವುಗಳ ಮೌಲ್ಯ ಸಮಾರು 1.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆ, ಪರಶುರಾಮ ಕೊಂಡದಲ್ಲಿ ಪುಣ್ಯ ಸ್ನಾನ