ತೀರ್ಥಹಳ್ಳಿ ಜೋಡಿ ಕೋಲೆ, ಕಾರಣ ಬಾಯಿಬಿಟ್ಟ ಆರೋಪಿ, ಇಡ್ಲಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ, ಆಗಿದ್ದೇನು?

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

SHIVAMOGGA LIVE NEWS | 19 MAY 2023

THIRTHAHALLI : ಸಮುದಾಯ ಭವನದಲ್ಲಿ (Community Hall) ನಡೆದ ಜೋಡಿ ಕೊಲೆ ಆರೋಪಿ ರಾಜಣ್ಣ ಎಂಬಾತನನ್ನು ಬಂಧಿಸಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಇಬ್ಬರ ಹತ್ಯೆಗೆ ರಾಜಣ್ಣ ಕಾರಣ ಬಾಯಿ ಬಿಟ್ಟಿದ್ದಾನೆ.

Two-Killed-in-Vishwakarma-Samudaya-Bhavana

ಇಡ್ಲಿ ವಿಚಾರಕ್ಕೆ ನಡೆದ ಕಿರಿಕ್‌

ಘಟನೆ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕುರುವಳ್ಳಿ ವಿಶ್ವಕರ್ಮ ಸಮುದಾಯ ಭವನದಲ್ಲಿ ಟೈಲ್ಸ್‌ ಕೆಲಸಕ್ಕಾಗಿ 12 ದಿನದ ಹಿಂದೆ ದಾವಣಗೆರೆಯಿಂದ ಐವರು ಕಾರ್ಮಿಕರು ಬಂದಿದ್ದರು. ರಾಜಣ್ಣ ಅಡುಗೆ ಮಾಡುವ ಜವಾಬ್ದಾರಿ ನಿಭಾಯಿಸುತ್ತಿದ್ದ. ಗುರುವಾರ ಬೆಳಗ್ಗೆ ಕಾರ್ಮಿಕರಿಗೆ ಇಡ್ಲಿ ಕೊಟ್ಟಿದ್ದರು. ರಾತ್ರಿ ಊಟಕ್ಕೂ ಅದೆ ಇಡ್ಲಿ ನೀಡಿದ್ದಾರೆ. ಇದೆ ವಿಚಾರವಾಗಿ ರಾಜಣ್ಣ ಜೊತೆಗೆ ಬೀರೇಶ ಮತ್ತು ಮಂಜುನಾಥ್‌ ಜಗಳವಾಡಿದ್ದರು. ಎಳೆದಾಡಿ ರಾಜಣ್ಣಗೆ ಹೊಡೆದಿದ್ದರು ಎಂದು ಆರೋಪಿಸಲಾಗಿದೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಪಿಕಾಸಿಯಿಂದ ಹೊಡೆದು ಹತ್ಯೆ

ರಾತ್ರಿ ಊಟ ಮುಗಿಸಿ ಎಲ್ಲರು ಮಲಗಿದ್ದರು. ಎಳೆದಾಡಿದ್ದರಿಂದ ಕೋಪಗೊಂಡಿದ್ದ ರಾಜಣ್ಣ ಟೆರೇಸ್‌ ಮೇಲೆ ಮಲಗಿದ್ದ ಮಂಜುನಾಥ ಮತ್ತು ಕಟ್ಟಡದ (Community Hall) ಒಳಗೆ ಮಲಗಿದ್ದ ಬೀರೇಶನ ತಲೆಗೆ ಪಿಕಾಸಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ – ಮನೆಯಲ್ಲಿ ಶೌಚಾಲಯಕ್ಕೆ ಹೋಗಿ ಹೊರ ಬಂದ ಕಾಂಗ್ರೆಸ್‌ ಹಿರಿಯ ನಾಯಕಿಗೆ ಕಾದಿತ್ತು ಶಾಕ್‌

ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಹೆಚ್ಚಿನ Shimoga News, Shivamogga News ಮತ್ತು THIRTHAHALLI, CRIME DIARY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಮೇ 19, 2023

Leave a Comment