ಶಿವಮೊಗ್ಗ ವೆಂಕಟೇಶನಗರದ ಮನೆಯೊಂದರ ಬಾವಿಗೆ ಬಿದ್ದು ನಿವೃತ್ತ ಶಿಕ್ಷಕಿ ಸಾವು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS
ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜುಲೈ 2021
➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಮಹಿಳೆಯೊಬ್ಬರು ಶಿವಮೊಗ್ಗದ ವೆಂಕಟೇಶನಗರದಲ್ಲಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಮೋಟರ್‍ ಪರಿಶೀಲನೆ ವೇಳೆ ಘಟನೆ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ನಿವೃತ್ತ ಶಿಕ್ಷಕಿ ನೀಲಮ್ಮ (73) ಮೃತರು. ಮನೆಯ ಕಾಂಪೌಂಡ್‍ನಲ್ಲಿದ್ದ ಬಾವಿಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಹೇಗಾಯ್ತು ಘಟನೆ? ಕಾರಣವೇನು?

ನೀಲಮ್ಮ  ವೆಂಕಟೇಶನಗರದಲ್ಲಿರುವ ತಮ್ಮ ಸಹೋದರನ ಮನೆಯಲ್ಲಿ ವಾಸವಾಗಿದ್ದರು. ಮನೆಯ ಕಾಂಪೌಂಡ್‍ನೊಳಗಿದ್ದ ಬಾವಿಗೆ ಅಳವಡಿಸಿದ್ದ ಮೋಟರ್ ಕೆಟ್ಟು ಹೋಗಿತ್ತು. ನಿನ್ನೆ ಸಂಜೆ ಮೋಟರ್ ರಿಪೇರಿಗಾಗಿ ಬಾವಿಗೆ ಅಳವಡಿಸಿದ್ದ ಜಾಲರಿಯನ್ನು ಮೇಲೆತ್ತಲಾಗಿತ್ತು ಎಂದು ಹೇಳಲಾಗುತ್ತಿದೆ. ಇದುವೆ ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ಇವತ್ತು ಬೆಳಗ್ಗೆ ನೀಲಮ್ಮ ಅವರು ಮೋಟರ್‍ ಸರಿಯಾಗಿದೆಯಾ ಎಂದು ಪರಿಶೀಲಿಸಲು ಬಾವಿ ಬಳಿಗೆ ಬಂದಿದ್ದಾರೆ. ಈ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿರುವ ಶಂಕೆ ಇದೆ. ನೀಲಮ್ಮ ಅವರು ಮನೆಯಲ್ಲಿ ಕಾಣದಿದ್ದಾಗ ಮನೆಯವರು ಹುಡುಕಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ.

ಆಂಬುಲೆನ್ಸ್ ಚಾಲಕನ ನೆರವಿನಿಂದ, ಅಗ್ನಿಶಾಮಕ ಸಿಬ್ಬಂದಿಗಳು, ಪೊಲೀಸರು ನೀಲಮ್ಮ ಅವರ ಮೃತದೇಹವನ್ನು ಮೇಲೆತ್ತಿದ್ದಾರೆ. ಜಯನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

Leave a Comment